Monday, August 8, 2022

Latest Posts

ಹಮಾಸ್ ಕ್ಷಿಪಣಿಗಳಿಂದ ಇಸ್ರೇಲನ್ನು ರಕ್ಷಿಸುತ್ತಿರುವ ಅದೃಶ್ಯ ಕವಚ: ‘ಐರನ್ ಡೋಮ್’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಬಿಕ್ಕಟ್ಟು ತೀವ್ರವಾಗಿದ್ದು, ಹಮಾಸ್ ಉಪಯೋಗಿಸುತ್ತಿರುವ ಕ್ರಾಕೆಟ್ಗಳನ್ನು ಇಸ್ರೇಲ್ ಯಶಸ್ವಿಯಾಗಿ ತಡೆಯುತ್ತಿರುವುದು ಪ್ರಸ್ತುತ ಕದನದ ಆಸಕ್ತಿಕರ ಅಂಶವಾಗಿದೆ. ಇದಕ್ಕೆ ಕಾರಣ ಇಸ್ರೇಲಿನ ಐರನ್ ಡೋಮ್.

ಏನಿದು ಐರನ್ ಡೋಮ್?
ಶತ್ರುರಾಷ್ಟ್ರಗಳು ದಾಳಿ ನಡೆಸಲು ಬಳಸುವ ರಾಕೆಟ್, ಕ್ಷಿಪಣಿ, ಹೆಲಿಕಾಪ್ಟರ್ ಗಳನ್ನು ರಡಾರ್ ಮೂಲಕ ಪತ್ತೆ ಹಚ್ಚುವ ಸಾಮರ್ಥ್ಯದ ರಕ್ಷಣಾ ವ್ಯವಸ್ಥೆ ಇದು.

ಹೇಗೆ ಕೆಲಸ ಮಾಡುತ್ತದೆ?
ಐರನ್ ಡೋಮ್ ನ ರಡಾರ್ ಎದುರಾಳಿ ಪಾಳೆಯದಿಂದ ಬರುವ ರಾಕೆಟ್ ಗಳನ್ನು ಕೂಡಲೇ ಪತ್ತೆ ಹಚ್ಚುತ್ತದೆ. ಅದರ ಬೆನ್ನಲ್ಲೇ ಇದೇ ಶಸ್ತ್ರ ವ್ಯವಸ್ಥೆಯ ಪ್ರತಿದಾಳಿ ವ್ಯವಸ್ಥೆ ಸಕ್ರಿಯವಾಗಿ, ಬರುತ್ತಿರುವ ರಾಕೆಟ್ಟಿನ ಜಾಡು ಹಿಡಿದು ಅದನ್ನು ನಭದಲ್ಲೇ ಹೊಡೆದುರುಳಿಸುತ್ತದೆ. ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೀವು ಹಿಂದೆ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿ ಯುದ್ಧ ದೃಶ್ಯಗಳಲ್ಲಿ ಎದುರಾಳಿ ಪ್ರಯೋಗಿಸಿದ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಿ ಧ್ವಂಸಗೊಲಿಸುವ ಚಿತ್ರಣ ನೆನಪಿಸಿಕೊಳ್ಳಿ. ಅಲ್ಲಿ ಮನುಷ್ಯ ಬಲವಾಗಿದ್ದರೆ ಇಲ್ಲಿ ಐರನ್ ಡೋಮ್ ವ್ಯವಸ್ಥೆಯೇ ಇದನ್ನೆಲ್ಲ ನಿಭಾಯಿಸಿಬಿಡುತ್ತದೆ.

ಯಾವಾಗ ಪ್ರಾರಂಭ?
ಇದು ಇಸ್ರೇಲ್ ನಲ್ಲಿ 2011ರಿಂದ ಕಾರ್ಯನಿರ್ವಹಿಸುತ್ತಿದ್ದು, ಆನಂತರದ ಅನೇಕ ಸಂಘರ್ಷಗಳಲ್ಲಿ ರಾಕೆಟ್ ಗಳನ್ನು ತಡೆದು ಉರುಳಿಸಿದೆ. ಇದರಿಂದ ಸಾವಿರಾರು ರಾಕೆಟ್ ಗಳನ್ನು ಈಗಾಗಲೇ ನಾಶ ಮಾಡಲಾಗಿದೆ.

ಏನಿದರ ವಿಶೇಷ?

ಐರನ್ ಡೋಮ್ ಮಳೆ, ಗಾಳಿ, ಬಿಸಿಲು, ಮೋಡ ಹೀಗೆ ಎಂಥದೇ ಪ್ರತಿಕೂಲ ಹವಾಮಾನದಲ್ಲಾದರೂ ಕೆಲಸ ಮಾಡುತ್ತದೆ. ಹಲವು ಬಗೆಯ ಅಪಾಯಗಳಿಗೆ ಬೆದರಿಕೆಗಳಿಗೆ ಏಕಕಾಲದಲ್ಲಿ ಉತ್ತರಿಸುವ ಸಾಮರ್ಥ್ಯ ಇದಕ್ಕಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲೂ ಸುಲಭ. ನೌಕಾಪಡೆಯಲ್ಲೂ ಇದರ ಉಪಯೋಗವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss