POSITIVE STORY| ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆ ಯಾವುದು ಗೊತ್ತೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022ನೇ ಸಾಲಿನ ಕರ್ನಾಟಕ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣಿಯಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಆಯ್ಕೆಯಾಗಿದೆ.

ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯ ದೆಹಲಿ ಇವರ ಸಲಹಾ ಸಂಸ್ಥೆಯ ತಂಡ ನಿಪ್ಪಾಣಿ ಗ್ರಾಮೀಣ ಠಾಣೆಯ ಮೌಲ್ಯಮಾಪನ ಕಾರ್ಯವನ್ನು ಇತ್ತೀಚೆಗೆ ಕೈಗೊಂಡಿತ್ತು. ಈ ತಂಡವು ನಿಪ್ಪಾಣೆ ಗ್ರಾಮೀಣ ಠಾಣೆಯ ಒಳಾಂಗಣ, ಹೊರಾಂಗಣ ಸ್ವಚ್ಛತೆ, ಪೊಲೀಸ್ ಠಾಣೆಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಕಾಂಪೌಂಡ್ ವ್ಯವಸ್ಥೆ, ಪೊಲೀಸ್ ಠಾಣೆ ಕಟ್ಟಡ, ಲಾಕ್ ಅಪ್ ಕೋಣೆ, ಸಿಬ್ಬಂದಿಗಳ ವಿಶ್ರಾಂತಿ ಸ್ಥಳ, ಮಹಿಳಾ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ, ದಾಖಲಾತಿಗಳ ಸಂಗ್ರಹಣೆ, ಪೊಲೀಸ್ ಠಾಣೆಯ ಸುರಕ್ಷತೆ, ಭದ್ರತೆ, ಶೌಚಾಲಯಗಳ ವ್ಯವಸ್ಥೆ, ಅಪರಾಧ ಪ್ರಕರಣಗಳು, ತನಿಖಾ ವಿಧಾನ, ಅಪರಾಧ ಪತ್ತೆ ಕಾರ್ಯ ವಿಧಾನ, ಹಳೆಯ ಪ್ರಕರಣಗಳ ವಿಲೇವಾರಿ, ಪ್ರಕರಣಗಳಲ್ಲಿ ಶಿಕ್ಷೆ, ಕಾನುನು-ಸುವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮೌಲ್ಯಮಾಪನ ಮಾಡಲಾಗಿತ್ತು.

ಅಷ್ಟೇ ಅಲ್ಲದೇ, ಪೊಲೀಸ್ ಠಾಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಲಭ್ಯತೆ, ನಡೆವಳಿಕೆ, ದೂರುದಾರರ ಬಗ್ಗೆ ಕಾಳಜಿ, ಜಾತಿ, ಧರ್ಮ, ತಾರತಮ್ಯ ಹೀಗೆ ಮುಂತಾದ ವಿಷಯಗಳ ಕುರಿತು ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಸಲಹಾ ಸಂಸ್ಥೆಯ ತಂಡ ಭೇಟಿ ನೀಡಿ ಮಾಹಿತಿ ಪಡೆದಿತ್ತು.

ಠಾಣೆಯ ಬಗ್ಗೆ ಸಾರ್ವಜನಿಕರಿಂದ ನೇರವಾಗಿ ಮೌಲ್ಯಮಾಪನ ಮಾಡಲಾಗಿತ್ತು. ಠಾಣಾಧಿಕಾರಿಗಳಿಗೆ ಸುಮಾರು 200 ರಿಂದ 250 ಪ್ರಶ್ನಾವಳಿಯ ಮೂಲಕ ಮೌಲ್ಯಪಾನ ಮಾಡಲಾಯಿತು. ಈ ತಂಡವು ದೇಶದ ವಿವಿಧ ಪೊಲೀಸ್ ಠಾಣೆಗಳ ಮೌಲ್ಯಮಾಪನ ಮಾಡಿ, ಕೊನೆಗೆ 2022ನೇ ಸಾಲಿನ ಕರ್ನಾಟಕದ ಅತ್ಯುತ್ತಮ ಪೊಲೀಸ್ ಠಾಣೆ ಎಂದು ನಿಪ್ಪಾಣಿಯ ಗ್ರಾಮೀಣ ಠಾಣೆಯನ್ನು ಆಯ್ಕೆ ಮಾಡಿದ್ದಾಗಿ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಈ ಯಶಸ್ವಿಗೆ ಕಾರಣರಾದ ಚಿಕ್ಕೋಡಿ ಡಿಎಸ್ಪಿ ಬಸವರಾಜ ಯಲಿಗಾರ, ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ, ಠಾಣೆಯ ಪಿಎಸ್ಐ ಅನಿಲ ಕುಂಬಾರ ಹಾಗೂ ಎಲ್ಲ ಸಿಬ್ಬಂದಿ ಜನರ ಕೊಡುಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್ಪಿ ವೇಣುಗೋಪಾಲ ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!