ನಾವು ಮಾಡುವ ಸಾಮಾನ್ಯ ತಪ್ಪುಗಳಿಂದ ಆರೋಗ್ಯಕ್ಕೆ ಹಾನಿ, ಯಾವ ತಪ್ಪುಗಳು ಗೊತ್ತಾ?

ನಾವು ಕೆಲವೊಂದು ತಪ್ಪು ಮಾಡುತ್ತೇವೆ, ಆದರೆ ಅದು ತಪ್ಪು ಎಂದು ತಿಳಿಯೋದಿಲ್ಲ. ಅದು ತಪ್ಪು ಎಂದು ಗೊತ್ತಾಗುವ ವೇಳೆ ನಮ್ಮ ಆರೋಗ್ಯಕ್ಕೆ ಹಾನಿ ಆಗುತ್ತದೆ. ಯಾವ ರೀತಿ ಹಾನಿ, ಯಾವ ತಪ್ಪುಗಳು ಇಲ್ಲಿದೆ ಮಾಹಿತಿ..

ತಿಂಡಿ ಇಲ್ಲದೆ ದಿನ ಆರಂಭಿಸೋದು, ಸ್ವಲ್ಪ ಪೆಟ್ರೋಲ್ ಇರುವ ಕಾರ್‌ನಲ್ಲಿ ನೀವು ಓಡಾಡಬಹುದು ಆದರೆ ಕ್ರಮೇಣ ಗಾಡಿ ನಿಂತು ಹೋಗುತ್ತದೆ. ನಿಮ್ಮ ದೇಹವೂ ಅಷ್ಟೇ ತಿಂಡಿಯಿಲ್ಲದೆ ದಿನ ಆರಂಭಿಸಬಹುದು ಆದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿ, ಡಯಾಬಿಟಿಸ್ ಕೂಡ ಬರಬಹುದು.

ತೂಕದ ಬ್ಯಾಗ್ ಎತ್ತುವುದು ನಿಮ್ಮನ್ನು ಶಕ್ತಿವಂತರಂತೆ ಕಾಣುತ್ತದೆ, ಆದರೆ ಇದರಿಂದ ಆರೋಗ್ಯ ಹಾನಿ, ಸರಿಯಾದ ಪೊಸಿಶನ್ ಇಲ್ಲದಿರುವುದು ಹಾಗೂ ಮೂಳೆಗೆ ಸಂಬಂಧಿಸಿದ ಸಮಸ್ಯೆ ಬಾಧಿಸುತ್ತದೆ.

ಅತಿಯಾಗಿ ವ್ಯಾಯಾಮ ಮಾಡುವುದು ಉತ್ತಮವಾದ ವಿಚಾರ ಅಲ್ಲ, ದೇಹಕ್ಕೆ ಹೆಚ್ಚು ದಣಿವು, ಮಸಲ್ ಡ್ಯಾಮೇಜ್, ಮೂಳೆ ಮುರಿತ, ಹಾರ್ಮೋನ್ ಬದಲಾವಣೆ ನಿಮ್ಮನ್ನು ಕಾಡಬಹುದು.

ಕಾರ್‌ನಲ್ಲಿ ಸೆಕೆ ಎಂದು ಕಿಟಕಿ ತೆಗೆಯುವುದು ಒಳ್ಳೆಯದಲ್ಲ. ಅತಿ ಹೆಚ್ಚು ಮಲಿನವಾದ ಗಾಳಿ ಸೇವನೆ ಮಾಡುತ್ತೀರಿ. ಇದು ನಿಮ್ಮ ಶ್ವಾಸಕೋಶಕ್ಕೆ ತೊಂದರೆ ನೀಡುತ್ತದೆ.

ಕಡಿಮೆ ನಿದ್ದೆ ಮಾಡಿ, ಹೆಚ್ಚು ಕೆಲಸ ಮಾಡುವುದರಿಂದ ದೀರ್ಘಜಾಕದ ಅನಾರೊಗ್ಯ ಕಾಡಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!