ಗಂಡ- ಹೆಂಡತಿ ಅಂದಮೇಲೆ ಸ್ವಲ್ಪವಾದ್ರೂ ಜಗಳವಾಡಲೇ ಬೇಕು. ಇಲ್ಲಾ ಅಂದ್ರೆ ನೋಡುವವರಿಗೆ ಇವರೇನು ಗಂಡ-ಹೆಂಡತಿ ಹೌದಾ-ಅಲ್ಲವಾ ಎನ್ನುವ ಅನುಮಾನ ಬರುವುದಿಲ್ಲವೇ? ಹೀಗೆ ಗಂಡ-ಹೆಂಡತಿ ಜಗಳವಾಡವುದು ಕೇವಲ ನಮ್ಮ-ನಿಮ್ಮ ಮನೆಯಲ್ಲಿ ಅಂದುಕೊಳ್ಳಬೇಡಿ. ಈ ಜಗಳ ಎಲ್ಲಿ ಹೋದರೂ ಇರುವಂತಹದ್ದೇ. ಸಾಮಾನ್ಯವಾಗ ಹೆಂಡತಿಯರು ಯಾವ ವಿಷಯಕ್ಕೆ ಗಂಡಂದಿರ ಜೊತೆ ಜಗಳಕ್ಕೆ ಇಳಿಯುತ್ತಾರೆ? ಯಾವ ವಿಷಯಕ್ಕೆ ಮುನಿಸಿಕೊಳ್ಳುತ್ತಾರೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ…
- ಒದ್ದೆ ಟವೆಲನ್ನು ಹಾಸಿಗೆ ಮೇಲೆ ಹಾಕಬೇಡಿ ಎಂದು ಎಷ್ಟು ಸಾರಿ ಹೇಳಿದರೂ ಕೇಳುವುದಿಲ್ಲ. ಸ್ನಾನ ಮಾಡಿ ಮೈ ವರೆಸಿದ ಟವೆಲ್ ಹಾಗೇ ಹಾಸಿಗೆ ಮೇಲೆ ಹಾಕುತ್ತಾರೆ.
- ರಸ್ತೆಯಲ್ಲಿ ನನ್ನ ಜೊತೆಯಾಗಿಯೇ ಹೋಗಿ ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಮುಂದೆ ಮುಂದೆ ಹೋಗುತ್ತಾರೆ. ನಾನೊಬ್ಬಳು ಜೊತೆಗಿದ್ದೇನೆ ಎನ್ನುವುದನ್ನೇ ಮರೆಯುತ್ತಾರೆ.
- ಮನೆಯೊಳಗೆ ಶೂ ಹಾಕಿಕೊಂಡು ಬರಬೇಡಿ ಎಂದರೆ ಅವರೆಲ್ಲಿ ಕೇಳುತ್ತಾರೆ. ನಾನು ಕ್ಲೀನ್ ಮಾಡಿದ್ದೆಲ್ಲವೂ ವೇಸ್ಟ್.
- ನನ್ನ ಮಾತಿಗೆ ಒಂದೂ ಚೂರು ಗೌರವವಿಲ್ಲ. ನಾನು ಹೇಳಿದ್ದನ್ನು ಕೇಳಿದ ಉದಾಹರಣೆಯೇ ಇಲ್ಲ.
- ಉಳಿದ ವಿಷಯ ಹಾಗಿರಲಿ. ನನ್ನು ಹುಟ್ಟು ಹಬ್ಬ ಸಹ ನೆನಪಿಟ್ಟುಕೊಳ್ಳುವುದಿಲ್ಲ. ನಾನೆಂದರೆ ಎಷ್ಟು ಅಲಕ್ಷ್ಯ ನೋಡಿ..
- ನನ್ನ ತಂದೆ-ತಾಯಿಯ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಯಾರೋ ಪರಕೀಯರಂತೆ ಮಾಡುತ್ತಾರೆ.
- ಅಬ್ಬಾ! ಈ ಕರ್ಚೀಪು ನೋಡಿದರೆ ವಾಕರಿಕೆ ಬರುತ್ತದೆ. ಅದೆಷ್ಟು ಗಲೀಜು ಮಾಡಿಕೊಂಡಿದ್ದಾರಪ್ಪಾ!
- ಪ್ರತಿ ತಿಂಗಳೂ ಅರ್ಧ ಸ್ಯಾಲರಿ ನಂಗೆ ಕೊಡಿ ಅಂತೀನಿ, ಒಂದು ಪೈಸೆ ಕೊಡೋದಿಲ್ಲ.