ರೈಲಿನ ಕೊನೆ ಕೋಚ್ ​ನಲ್ಲಿ ʼXʼ ಚಿಹ್ನೆ ಯಾಕೆ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೇ ಒಂದು ಕಡೆಯಿಂದ ಮತ್ತೊಂದು ಕಡೆ ತಮ್ಮನ್ನು ತಲುಪಿಸುವ ಸೇತುವೆ. ರೈಲಿನಲ್ಲಿ ಎಲ್ಲರು ಪ್ರಯಾಣಿಸಿಯೇ ಪ್ರಯಾಣಿಸಿರುತ್ತೀರಾ. ಈ ವೇಳೆ ಅನೇಕರು ಅದ್ರಲ್ಲಿ ಇರುವ ಅನೇಕ ಚಿಹ್ನೆ , ಸೂಚನ ಫಲಕಗಳ ಕುರಿತು ತಿಳಿಯಲು ಇಷ್ಟಪಡುತ್ತಾರೆ. ಇನ್ನು ಕೆಲವರು ಇದರ ಮೇಲಿರುವ ಬರಹಗಳ ಕಡೆಗೆ ಹೆಚ್ಚು ಗಮನ ಕೊಟ್ಟಿರುವುದಿಲ್ಲ.

ಹಾಗೆಯೇ ಕಾಣಿಸುವ ಒಂದು ಚಿಹ್ನೆ ರೈಲಿನ ಕೊನೆಯ ಕೋಚ್‌ನ ಹಿಂದಿನ “X” ಚಿಹ್ನೆ.

ಹೌದು, ಸಾಮಾನ್ಯವಾಗಿ ರೈಲಿನ ಕೊನೆಯ ಬೋಗಿ ನೋಡಿದರೆ ನಿಮಗೆ “X” ಚಿಹ್ನೆ ಕಾಣಸಿಗುತ್ತದೆ . ಆದ್ರೆ ಅದು ಯಾಕೆ ಹಾಕಿರುತ್ತಾರೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಇದೀಗ ಈ ಕುರಿತು ರೈಲ್ವೇ ಸಚಿವಾಲಯ ಟ್ವಿಟರ್‌ನಲ್ಲಿ ವಿವರಿಸಿದೆ. ಈ ಚಿಹ್ನೆ ಏಕೆ ಬರೆಯುತ್ತಾರೆ ಎಂದು ತಿಳಿಸಿದೆ.
ರೈಲ್ವೇ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯ ಪೋಸ್ಟ್ ಪ್ರಕಾರ, ಹಳದಿ “X” ಚಿಹ್ನೆಯು ಯಾವುದೇ ಕೋಚ್‌ಗಳನ್ನು ಬಿಡದೆ ರೈಲು ಹಾದುಹೋಗಿದೆ ಎಂದು ಸೂಚಿಸುತ್ತದೆ. ಯಾವುದೇ ಕೋಚ್‌ಗಳನ್ನು ಬೇರ್ಪಡಿಸದೆ ರೈಲು ಸಂಪೂರ್ಣವಾಗಿ ಹಾದುಹೋಗಿದೆ ಎಂಬ ದೃಢೀಕರಣವನ್ನು ಪಡೆಯಲು ರೈಲ್ವೆ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!