ನೀವು ಕಾಫಿಯನ್ನು ಪ್ರೀತಿಸುತ್ತೀರಾ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದುಕೊಳ್ಳಬೇಕು…

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕಾಫಿ ಪ್ರಿಯರ ಪಾಲಿಗೆ ದಿನ ಪ್ರಾರಂಭವಾಗುವುದೇ ಬಿಸಿಬಿಸಿ ಕಾಫಿಯಿಂದ. ಇದನ್ನು ಬೆಳಗಿನ ಪಾನೀಯವಾಗಿ ಸೇವಿಸುವುದರಿಂದ ಹಿಡಿದು, ಕೆಲಸದ ನಡುವೆ ಆರಾಮವಾಗಿ ಹೀರುವವರೆಗೆ, ದಿನವಿಡೀ ಹಲವಾರು ಬಾರಿ ಸೇವಿಸುತ್ತಲೇ ಇರುವ ಅನೇಕ ಜನರಿದ್ದಾರೆ. ಆದಾಗ್ಯೂ, ಮನಸ್ಸಿಗೆ ಹಿತ ನಿಡುತ್ತದೆ ಎಂದು ಕಾಫಿಯನ್ನು ಇಷ್ಟಬಂದಂತೆಲ್ಲ ಸೇವಿಸುವ ಮುನ್ನ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಹೆಚ್ಚು ಕಾಫಿ ಸೇವನೆಯು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಕಾಫಿ ಸೇವನೆಯು ಮಿತಿಯಲ್ಲಿದ್ದರೆ ಚೆನ್ನ. ಈ ಬಗ್ಗೆ ಪೌಷ್ಟಿಕತಜ್ಞೆ ಪೂಜಾ ಮಲ್ಹೋತ್ರಾ ಕಾಫಿ ಪ್ರಿಯರಿಗೆ ಕೆಲವೊಂದು ಅಗತ್ಯ ಆರೋಗ್ಯ ಸೂಚನೆಗಳನ್ನು ನೀಡಿದ್ದಾರೆ.
1) ಖಾಲಿ ಹೊಟ್ಟೆಯಲ್ಲಿ ಕಾಫಿಯನ್ನು ಕುಡಿಯುವುದನ್ನು ಬಿಟ್ಟುಬಿಡಿ. ಎದ್ದ ಕೂಡಲೇ ಕಾಫಿಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಸ್ವಲ್ಪವೂ ಒಳ್ಳೆಯದಲ್ಲ.
2) ನೀವು ಮುಖ್ಯ ಊಟದ ಜೊತೆಗೆ ಕಾಫಿಯನ್ನು ಸವಿಯುವುದನ್ನು ತಪ್ಪಿಸಬೇಕು. ಏಕೆಂದರೆ ದೇಹವು ಊಟದಿಂದ ಕಬ್ಬಿಣಾಂಶಗಳನ್ನು ಹೀರಿಕೊಳ್ಳುವಿಕೆಗೆ ಕಾಫಿ ಅಡ್ಡಿಪಡಿಸುತ್ತದೆ.
3) ಸೂರ್ಯಾಸ್ತದ ನಂತರ ಕಾಫಿಯನ್ನು ಕುಡಿಯಬೇಡಿ. ಏಕೆಂದರೆ ಅದು ನಿದ್ರೆಯ ಚಕ್ರಗಳಿಗೆ ಅಡ್ಡಿಪಡಿಸುತ್ತದೆ. ಮತ್ತು ನಿದ್ರಿಸಲು ತೊಂದರೆ ಉಂಟುಮಾಡಬಹುದು.
4) ಅಲ್ಲದೆ, ನೀವು ತೀವ್ರವಾದ ಆಮ್ಲೀಯತೆಯನ್ನು ಹೊಂದಿರುವವರಾಗಿದ್ದರೆ, ನಿಮ್ಮ ಕಾಫಿಯು ದೇಹವನ್ನು ಮತ್ತಷ್ಟು ಹದಗೆಡಿಸಬಹುದು ಎಂಬುದನ್ನು ನೆನಪಿಡಿ.
ಈ ಎಲ್ಲಾ ಸಂದರ್ಭಗಳಲ್ಲಿ, ನೀವು ಡಿಕಾಫ್ ಕಾಫಿಗೆ ಬದಲಾಯಿಸಿಕೊಳ್ಳಬಹುದು ಎಂದು ಪೂಜಾ ಸೂಚಿಸುತ್ತಾರೆ. ಪ್ರತಿದಿನ ಸರಾಸರಿ ಎರಡರಿಂದ- ಮೂರು ಕಪ್ ಕಾಫಿ ಕುಡಿಯುವುದು ಜನರಿಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ಅವರು ವಿವರಿಸುತ್ತಾರೆ. ಆದರೆ, ಗರ್ಭಿಣಿಯಾಗಿರು ಹಾಗೂ ಅಥವಾ ಸ್ತನ್ಯಪಾನ ಮಾಡಿಸುವ ಸ್ತ್ರೀಯರು ದೈನಂದಿನ ಕೆಫೀನ್ ಸೇವನೆಯನ್ನು ಕಡಿಮೆಗೊಳಿಸಬೇಕು. ವೈದ್ಯರ ಸಲಹೆ ಮೇರೆಗೆ ಸುರಕ್ಷಿತ ಮಿತಿಯಲ್ಲಿಯೇ ಕಾಫಿಯನ್ನು ಸೇವಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!