ಮನೆ ಔಷಧವೇ ಆಗಲಿ, ಡಾಕ್ಟರ್ ಕೊಟ್ಟ ಟಾಬ್ಲೆಟ್, ಸಿರಪ್ ಆಗಲಿ, ಇದನ್ನು ಕುಳಿತುಕೊಂಡೇ ಸೇವಿಸಬೇಕು ಎನ್ನುತ್ತಾರೆ ಮನೆಯ ಹಿರಿಯರು. ‘ಧನ್ವಂತರಾಯೇನ್ ನಮಃ’ ಎನ್ನುತ್ತಾ ಕುಳಿತುಕೊಂಡು ಔಷಧಗಳನ್ನು ಸೇವಿಸಬೇಕು ಎನ್ನುತ್ತಾರೆ. ಏಕಿರಬಹುದು ಹೀಗೆ ಹೇಳುವುದು?
ನಮ್ಮ ಹಿರಿಯರು ಇಂತಹದೊಂದು ಪದ್ಧತಿ ತಂದಿರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ .ಔಷದಗಳನ್ನು ನಿಂತುಕೊಂಡು ಒಂದೇ ಸಮನೆ ಕುಡಿಯುವುದರಿಂದ ರಭಸವಾಗಿ ನಮ್ಮ ಜೀರ್ಣಾಂಗವನ್ನು ಸೇರುತ್ತದೆ. ಜೊತೆಗೆ ಔದಧ ಜೊತೆ ಸೇವಿಸುವ ನೀರಿನಲ್ಲಿನ ಕೆಲವೊಂದು ನಮ್ಮ ಕಣ್ಣಿಗೆ ಕಾಣದ ಕಲ್ಮಶಗಳು ನೇರವಾಗಿ ಹೋಗಿ ಮೂತ್ರ ಪಿಂಡಗಳಲ್ಲಿ ಮತ್ತು ಮೂತ್ರ ಕೋಶಗಳಲ್ಲಿ ಶೇಖರಣೆಯಾಗುತ್ತದೆ. ಹೀಗಾದರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕುಳಿತು ಔಧಗಳನ್ನು ಸೇವಿಸಬೇಕು.