spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇದ್ದಕ್ಕಿದಂತೆ ತಲೆಸುತ್ತಿ ಬೀಳ್ತೀರಾ? ಇವುಗಳೇ ಕಾರಣವಿರಬಹುದು ನೋಡಿ…

- Advertisement -Nitte

ಕೆಲವರಿಗೆ ಬೆಳಗ್ಗೆ ಏಳುತ್ತಲೇ ತಲೆ ಸುತ್ತು, ಸುತ್ತು ಕಾಡುತ್ತದೆ. ಮತ್ತೆ ಕೆಲವರು ಬಿಸಿಲಿನಿಂದಲೂ ತಲೆ ತಿರುಗಿ ಬೀಳ್ತಾರೆ ಅಂತ ಕೇಳಿದ್ದೀವಿ.. ಆದರೆ ಇಷ್ಟಕ್ಕೂ ಈ ರೀತಿ ಪದೇ ಪದೇ ತಲೆಸುತ್ತಿ ಬೀಳೋಕೆ ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ.

ಕಾರಣವೇನು?

ಅತಿಯಾದ ಮದ್ಯಪಾನ ಸೇವನೆ
ರಕ್ತದೊತ್ತಡ, ಸಕ್ಕರೆ ಅಂಶ ಕಡಿಮೆಯಾದರೆ
ನೀರಿನಂಶ ಕಡಿಮೆಯಾದರೆ
ನಿದ್ದೆ ಕಡಿಮೆಯಾದಾಗ
ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ
ಬಿಸಿಲಿನಲ್ಲಿ ಹೆಚ್ಚು ಹೊತ್ತು ಇದ್ದರೆ
ಟೆನ್ಷನ್
ಅತಿಯಾದ ವ್ಯಾಯಾಮ
ಮಲಬದ್ಧತೆ
ಹೃದಯ ಸಂಬಂಧಿ ಸಮಸ್ಯೆ

ಈ ಮೇಲ್ಕಂಡ ಕಾರಣಗಳಿಂದ ಕೆಲವರು ಪದೇ ಪದೇ ತಲೆಸುತ್ತಿ ಬೀಳುತ್ತಾರೆ. ಇಂತಹ ಸಮಸ್ಯೆಯಿಂದ ಹೊರಬರಲು ಈ ಮನೆಮದ್ದು ಟ್ರೈ ಮಾಡಿ..

ಲೆಮೆನ್ ಟೀ: ಇದರಲ್ಲಿ ಹೆಚ್ಚಿನ ಆಂಟಿ ಇನ್ ಫ್ಲಾಮೇಟರಿ ಹಾಗೂ ಆಂಟಿ ವೈರಸ್ ಅಂಶಗಳಿದ್ದು, ರಕ್ತದೊತ್ತಡ, ಮೈಗ್ರೇನ್ ನಂತಹ ಸಮಸ್ಯೆಗಳಿಗೆ ಪರಿಹಾರವಾಗಲಿದೆ.

ಶುಂಠಿ: ದೇಹದಲ್ಲಿ ರಕ್ತಸಂಚಾರ ಉತ್ತಮಗೊಳಿಸಲು ಶುಂಠಿ ಸೇವನೆ ಲಾಭದಾಯಕ

ಧನಿಯಾ ಬೀಜ: ರಾತ್ರಿ ಇಡೀ ನೀರಿನಲ್ಲಿ ನೆನೆಸಿಟ್ಟ ಧನಿಯಾ/ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದು ಪರಿಣಾಮಕಾರಿ.

ಏಲಕ್ಕಿ: ದಾಲ್ಚಿನ್ನಿ, ಏಲಕ್ಕಿ ಪುಡಿ ಮಿಶ್ರಣವನ್ನು ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ತಲೆಗೆ ಮಸಾಜ್ ಮಾಡಿಕೊಂಡರೆ ಉತ್ತಮ.

ತಲೆ ಸ್ನಾನ: ಮುಂಜಾನೆ ಬೇಗ ಅಥವಾ ರಾತ್ರಿ ತಡವಾಗಿ ತಲೆ ಸ್ನಾನ ಮಾಡದಿರಿ.

ಆಹಾರ: ಪ್ರತಿದಿನ ಸೇವಿಸುವ ಆಹಾರದಲ್ಲಿ ಹೆಚ್ಚು ತರಕಾರಿ, ಧಾನ್ಯಗಳು, ತೆಳು ಮಾಂಸ, ಮೀನು ಸೇವನೆ ಮಾಡುವುದು ಉತ್ತಮ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss