ಕೂದಲಿಗೆ ಎಣ್ಣೆ ಹಚ್ಚುವುದರ ಬಗ್ಗೆ ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಪ್ರತಿದಿನ ಕೂದಲಿಗೆ ಎಣ್ಣೆ ಹಚ್ಚಿದರೇನೇ ತೃಪ್ತಿ. ಮತ್ತೆ ಕೆಲವರಿಗೆ ಕೂದಲಿಗೆ ಎಣ್ಣೆ ಹಚ್ಚಿ ಕೆಲವೇ ಗಂಟೆಗಳಲ್ಲಿ ಸ್ನಾನ ಮಾಡಬೇಕು.. ಆದರೆ ಎಷ್ಟೋ ಸಲ ನಮ್ಮ ಕೂದಲನ್ನು ಆರೈಕೆ ಮಾಡುವಾಗ ನಾವೇ ಎಡವಿರುತ್ತೇವೆ. ಆ ತಪ್ಪುಗಳಾವುದು ಅಂತ ಇಂದು ತಿಳಿಯೋಣ..
ಕೂದಲು ಬಾಚಬೇಡಿ:
ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ನೀವು ಯಾವುದೇ ಕಾರಣಕ್ಕೂ ಬಾಚಬೇಡಿ. ಇದರಿಂದ ಕೂದಲುದುರುವಿಕೆ ಹಾಗೂ ಒಡೆಯುವುದು ಹೆಚ್ಚಾಗುವುದು. ಹಾಗಾಗಿ ಕೂದಲಿಗೆ ಎಣ್ಣೆ ಹೆಚ್ಚುವ ಮುನ್ನವೇ ಕೂದಲಿನಲ್ಲಿನ ಸಿಕ್ಕು ಬಾಚಿದರೆ ಉತ್ತಮ.
ಗಂಟೆಗಟ್ಟಲೇ ಬಿಡಬೇಡಿ:
ನೀವು ಎಣ್ಣೆ ಕೂದಲನ್ನು ತೊಳೆಯದೆ 6-8 ಗಂಟೆಗೂ ಹೆಚ್ಚು ಕಾಲ ಹಾಗೆಯೇ ಬಿಡುವುದರಿಂದ ಕೂದಲಿನಲ್ಲಿ ಕೊಳೆಗಳು ಸಂಗ್ರಹವಾಗುತ್ತದೆ.
ಕಡಿಮೆ ಎಣ್ಣೆ:
ಎಣ್ಣೆ ಹಚ್ಚುವಾಗ ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸೋದು ಒಳ್ಳೆಯದು. ಇಲ್ಲವಾದರೆ ನಿಮ್ಮ ಕೂದಲನ್ನು ಹೆಚ್ಚು ಕಾಲ ಜಿಡ್ಡಾಗಿಯೇ ಇರುವಂತೆ ಮಾಡುತ್ತದೆ.
ಗಂಟು ಕಟ್ಟಬೇಡಿ:
ಕೂದಲ ಪೋಷಣೆ ಮಾಡೋದಕ್ಕೆ ಕೂದಲಿಗೆ ಎಣ್ಣೆ ಹಚ್ಚುತ್ತೇವೆ. ಆದರೆ ಇದರ ಬಳಿಕ ಕೂದಲನ್ನು ಗಟ್ಟಿಯಾಗಿ ಗಂಟು ಕಟ್ಟುವುದನ್ನು ಮಾಡಬೇಡಿ. ಇದು ಕೂದಲುದುರುವಿಕೆಯನ್ನು ಹೆಚ್ಚಿಸುತ್ತದೆ.
ಒಂದೇ ಹೇರ್ ಪ್ರಾಡಕ್ಟ್:
ನೀವು ಕೂದಲಿಗೆ ಒಂದೇ ರೀತಿಯ ಹೇರ್ ಪ್ರಾಡಕ್ಟ್ ಬಳಸಿ. ಇದು ನಿಮ್ಮ ಕೂದಲನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡುತ್ತದೆ.