ಪ್ರತಿದಿನ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿದಿದೆ. ಆದರೆ ಇದರಿಂದ ನಮ್ಮ ದಿನಚರಿಯ ಮೇಲು ಪರಿಣಾಮ ಬೀರಲಿದೆ. ಬೆಳಗಿನ ಒಂದು ವಾಕ್ ಕೂಡ ನಮ್ಮ ಮನಸ್ಸನ್ನು ಹಗುರಗೊಳಿಸಲಿದೆ. ಹಾಗಿದ್ದರೆ ಬೆಳಗ್ಗಿನ ವ್ಯಾಯಾಮದಿಂದ ಏನೆಲ್ಲಾ ಲಾಭ ಇದೆ ನೋಡೋಣ ಬನ್ನಿ…
ಅಭ್ಯಾಸ: ಯಾವಾಗಲೂ ಕೆಲಸದೊತ್ತಡದಲ್ಲಿರುವ ನಮಗೆ ವ್ಯಾಯಾಮ ಒಂದು ಉತ್ತಮ ಅಭ್ಯಾಸವಾಗಿ ಬಿಡುತ್ತದೆ. ಸತತ 21 ದಿನ ಬಿಡದೇ ಯಾವುದೇ ವ್ಯಾಯಾಮ ಮಾಡಿದರೆ ಅದು ಅಭ್ಯಾಸ ಆಗುತ್ತದೆ.
ಹೆಚ್ಚು ಶಕ್ತಿ: ಬೆಳಗಿನ ವ್ಯಾಯಾಮ ಅಥವಾ ವಾಕ್ ಮಾಡುವುದರಿಂದ ನಮಗೆ ಹೆಚ್ಚು ಶಕ್ತಿ ನೀಡುತ್ತದೆ. ಇದು ನಮ್ಮ ಮಾನಸೀಕ ಸ್ಥಿರತೆ ಮೇಲೆ ಹೆಚ್ಚು ಪರಿಣಾಮಕಾರಿಯಾಗಲಿದೆ.
ಮೂಡ್: ದಿನಾ ಬೆಳಗ್ಗೆ ವ್ಯಾಯಮ ಮಾಡೋದರಿಂದ ನಮ್ಮ ಮೂಡ್ ಫ್ರೆಶ್ ಆಗುತ್ತದೆ. ವ್ಯಾಯಾಮದಿಂದ ನಮ್ಮ ಮನಸ್ಸು ಹೆಚ್ಚು ಸಕಾರಾತ್ಮ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ.
ರಕ್ತದೊತ್ತಡ: ಸತತ ವ್ಯಾಯಾಮದಿಂದ ಹೈಪರ್ ಟೆಂಶನ್ ಕಡಿಮೆ ಮಾಡುತ್ತದೆ. ಮುಂಜಾನೆ ಎದ್ದು ವ್ಯಾಯಾಮ ಅಥವಾ ವಾಕ್ ಮಾಡೋದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಶಿಸ್ತು: ಪ್ರತಿದಿನ ಅಂದುಕೊಂಡ ಟಾಸ್ಕ್ ಅನ್ನು ಬಿಡದೆ ಮಾಡುವುದರಿಂದ ನಮ್ಮಲ್ಲಿರುವ ಶಿಸ್ತಿನ ಅರಿವಾಗುತ್ತದೆ.