ವಾಟ್ಸಾಪ್‌ನಲ್ಲಿ ಹೆಚ್ಚು ಗುಡ್ ಮಾರ್ನಿಂಗ್ ಮೆಸೇಜ್ ಕಳಿಸುತ್ತೀರಾ? ಹೀಗೆ ಮಾಡ್ತಿದ್ರೆ ಅಕೌಂಟ್ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟಾ ಒಡೆತನದ ವಾಟ್ಸಾಪ್ ಕೋಟಿಗಟ್ಟಲೆ ಜನ ಬಳಸುತ್ತಿದ್ದಾರೆ. ಬಳಕೆದಾರರ ಪ್ರೈವೆಸಿ ಬಗ್ಗೆ ವಾಟ್ಸಾಪ್ ಹೆಚ್ಚೇ ಗಮನಹರಿಸುತ್ತಿದೆ. ನೂತನ ಐಟಿ ನಿಯಮದ ನಂತರ ಬಳಕೆದಾರರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ನೀಡಿರುವ ವಾಟ್ಸಾಪ್ ಸಣ್ಣ ತಪ್ಪಾದರೂ ಅಕೌಂಟ್ ನಿಷೇಧಿಸುತ್ತಿದೆ.

ಯಾವ ಮಟ್ಟಿಗೆ ಇದು ಗಂಭೀರವಾಗಿದೆ ಎಂದರೆ ಅತೀ ಹೆಚ್ಚು ಗುಡ್ ಮಾರ್ನಿಂಗ್ ಕಳಿಸಿದರೂ ವಾಟ್ಸಾಪ್ ಬ್ಯಾನ್ ಆಗುವ ಸಾಧ್ಯತೆ ಇದೆ. ಭಾರತದಲ್ಲಿ ಪ್ರತಿ ತಿಂಗಳು ಮಿಲಿಯನ್‌ಗಳಷ್ಟು ಅಕೌಂಟ್ ಇದೇ ಕಾರಣಕ್ಕೆ ಬ್ಯಾನ್ ಆಗುತ್ತಿದೆ.

ಅಕೌಂಟ್ ಸ್ಕ್ಯಾಮ್ ಇರಬಹುದು ಅಥವಾ ಗೊತ್ತಿಲ್ಲದ ವಿಷಯದ ಸತ್ಯಾಸತ್ಯತೆ ಅರಿಯದೆ ಸುಮ್ಮನೆ ಫಾರ್ವರ್ಡ್ ಮಾಡುತ್ತಿದ್ದಾರೆ ಎಂದಾದರೆ ಆ ಅಕೌಂಟ್ ಕೂಡ ನಿಷೇಧಕ್ಕೆ ಒಳಗಾಗಬಹುದು. ಭಾರತದಲ್ಲಿ ಸಾಕಷ್ಟು ಮಂದಿ ಬೆಳಗ್ಗೆ ಗುಡ್ ಮಾರ್ನಿಂಗ್ ಮೆಸೇಜ್‌ಗಳನ್ನು ಸಾಕಷ್ಟು ಮಂದಿಗೆ ಫಾರ್ವರ್ಡ್ ಮಾಡುತ್ತಾರೆ. ಈ ಕಾರಣದಿಂದ ನಿಮ್ಮ ವಾಟ್ಸಾಪ್ ನಿಷೇಧವಾಗಬಹುದು.

ಕಳೆದ ಆಗಸ್ಟ್‌ನಲ್ಲಿ 2.3 ಮಿಲಿಯನ್‌ನಷ್ಟು ಖಾತೆಗಳನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣ ತಪ್ಪು ಮಾಹಿತಿ ಶೇರ್ ಮಾಡಿರುವುದು ಹಾಗೂ ಸ್ಕ್ಯಾಮ್ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!