spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿದಿನ ಬೆಳಗ್ಗೆ ತಿಂಡಿ ಸ್ಕಿಪ್ ಮಾಡ್ತೀರಾ? ಹಾಗಿದ್ದರೆ ಈ ಸಮಸ್ಯೆಗಳು ತಪ್ಪಿದ್ದಲ್ಲ

- Advertisement -Nitte

ಬ್ಯುಸಿ ಲೈಫ್ ನಲ್ಲಿ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತೇವೆ. ಅದರಲ್ಲೂ ಊಟ, ತಿಂಡಿ ವಿಚಾರದಲ್ಲಿಯೇ ಹೆಚ್ಚು ಆಲಸ್ಯ, ನಿರ್ಲಕ್ಷ್ಯ.. ಆದರೆ ಬೆಳಗಿನ ತಿಂಡಿ ಸರಿಯಾದ ಸಮಯಕ್ಕೆ ಸೇವಿಸದಿದ್ದರೆ ಏನೆಲ್ಲಾ ಸಮಸ್ಯೆಯಾಗುತ್ತದೆ ಗೊತ್ತಾ?

ತೂಕ ಹೆಚ್ಚುತ್ತದೆ:  ಇಡೀ ರಾತ್ರಿ ದೇಹದಲ್ಲಿ ಆಹಾರ ಇಲ್ಲದೆ ಇರುವುದರಿಂದ ಬೆಳಗ್ಗೆಯೂ ತಿಂಡಿ ಸೇವಿಸದಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತೂಕ ಹೆಚ್ಚಾಗುತ್ತದೆ.

ಮೂಡ್ ಹಾಳಾಗುತ್ತದೆ: ತಿಂಡಿ ತಿನ್ನದೆ ಇದ್ದರೆ ನಿಶಕ್ತಿ ಹೆಚ್ಚಾಗಲಿದೆ. ಇದರಿಂದ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುವುದಲ್ಲದೆ, ಮೂಡ್ ಅನ್ನು ಹಾಳು ಮಾಡುತ್ತದೆ.

ಮಧುಮೇಹ: ಬೆಳಗ್ಗೆ ತಿಂಡಿ ಸೇವಿಸದಿದ್ದರೆ ಕಾಲ ಕಳೆದಂತೆ ಮಧುಮೇಹ ಸಮಸ್ಯೆ ಕಾಡಲಿದೆ.

ಹೃದಯಾಘಾತ: ಅಧ್ಯಯನದ ಪ್ರಕಾರ ಬೆಳಗ್ಗೆ ತಿಂಡಿ ಸೇವಿಸುವವರಿಗೆ ಹೋಲಿಸಿದರೆ ಆಹಾರ ಸೇವಿಸದೆ ಇರುವವರಿಗೆ ಹೃದಯಾಘಾತ ಆಗುವ ಸಾಧ್ಯತೆ ಇದೆ.

ಜ್ಞಾಪಕ ಶಕ್ತಿಗೆ ಕುಂದು, ತಲೆ ಸುತ್ತು: ಬೆಳಗ್ಗೆ ಏನು ಸೇವಿಸದಿದ್ದರೆ ದೇಹಕ್ಕೆ ಆಯಾಸ ಹೆಚ್ಚಾಗಿ ತಲೆ ಸುತ್ತು ಬರುವ ಸಾಧ್ಯತೆ ಇದೆ. ದೇಹಕ್ಕೆ ಸರಿಯಾದ ಸಮಯದಲ್ಲಿ ಪೌಷ್ಠಿಕ ಆಹಾರ ಸಿಗದ ಕಾರಣ ಮೆಮೊರಿ ಪವರ್ ಕಡಿಮೆಯಾಗುತ್ತದೆ.

ಕ್ಯಾನ್ಸರ್ ಆಗಬಹುದು: ಆಹಾರ ತ್ಯಜಿಸುವುದರಿಂದ ದೇಹದಲ್ಲಿ ಅನಗತ್ಯ ಬೊಜ್ಜು ಬೆಳೆಯುತ್ತದೆ. ಇದರಿಂದ ವ್ಯಕ್ತಿಯ ತೂಕ ಹೆಚ್ಚಾಗಿ ಕ್ಯಾನ್ಸರ್ ಬರುವ ಸಾಧ್ಯತೆಗಳು ಇದೆ.

ಕೂದಲು ಉದರುವುದು: ದೇಹದಲ್ಲಿ ಪ್ರೋಟೀನ್ ಅಂಶ ಕಡಿಮೆಯಾಗಿ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ.

ಮೈಗ್ರೇನ್: ತಿಂಡಿ ತಿನ್ನದಿದ್ದರೆ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ, ರಕ್ತದೊತ್ತಡ ಹೆಚ್ಚಾಗಿ ಮೈಗ್ರೇನ್ ಸಮಸ್ಯೆ ಬರಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss