ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊಸ ಮೊಬೈಲ್ ಖರೀದಿಸುವ ಪ್ಲಾನ್ ಇದ್ಯಾ? ಹಾಗಿದ್ದರೆ ಈ ವಿಚಾರಗಳ ಕಡೆ ಗಮನಕೊಡಿ

ಪ್ರತಿ ಸಲ ಹೊಸ ಮೊಬೈಲ್ ತೊಗೊಂಡು ಮನೆಗೆ ಬಂದ ಮೇಲೆ ಅನ್ನಿಸೋದು.. ಛೇ ಇದಕ್ಕಿಂದ ಆ ಮೊಬೈಲ್ ಚೆನ್ನಾಗಿತ್ತು ಅಂತ ಅಲ್ವಾ? ಆದರೆ ಇನ್ನು ಮುಂದೆ ಇಂತಹ ತಪ್ಪು ಮಾಡಬೇಡಿ. ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಖರೀದಿ ಮಾಡಿ..

ಬ್ಯಾಟೆರಿ:
ನೀವು ಯಾವುದೇ ಕಂಪನಿಯ ಮೊಬೈಲ್ ಕೊಳ್ಳುವಾಗಲೂ ಅದರ ಬ್ಯಾಟೆರಿ ಬ್ಯಾಕ್ ಅಪ್ ಹೇಗಿದೆ ಅಂತ ಒಮ್ಮೆ ಗಮನಿಸಿ. ಏಕೆಂದರೆ ಕೆಲವು ಮೊಬೈಲ್ ಗಳಲ್ಲಿ ಗೇಮ್ಸ್ ಆಡಿದರೆ, ಇಂಟರ್ನೆಟ್ ಬಳಸಿದರೆ ತುಂಬಾ ಬೇಗಾ ಚಾರ್ಚ್ ಖಾಲಿಯಾಗುತ್ತದೆ.

ಮೆಮೋರಿ:
ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡುವ ಫೋಟೋ, ವಿಡಿಯೋ ಗಳನ್ನು ಸ್ಟೋರ್ ಮಾಡೋಕೆ ಇಂಪಾರ್ಟೆಂಟ್ ಅಂದರೆ ಮೆಮೋರಿ. ಅದರಲ್ಲಿ ರ್ಯಾಮ್ ಹಾಗೂ ಇಂಟರ್ನಲ್ ಸ್ಟೋರೇಜ್ ಇರಲೇಬೇಕು. ಜೊತೆಗೆ ಮೆಮೋರಿ ಕಾರ್ಡ್ ಹಾಕೋಕೆ ವ್ಯವಸ್ಥೆ ಇದ್ಯಾ ಅಂತಾನೂ ಗಮನಿಸಕೊಳ್ಳಿ.

ಕ್ಯಾಮೆರಾ:
ಎಲ್ಲರೂ ಮೊಬೈಲ್ ಕೊಳ್ಳೋದೆ ಅದರಲ್ಲಿನ ಕ್ಯಾಮೆರಾ ನೋಡಿ. ಜಾಸ್ತಿ ಮೆಗಾಪಿಕ್ಸಲ್ ಇದ್ದರೆ ಕ್ಯಾಮೆರಾ ಕ್ವಾಲಿಟಿ ಚೆನ್ನಾಗಿ ಇದೆ ಅಂತ ಅಲ್ಲ. ಮೊಬೈಲ್ ನಲ್ಲಿನ ಐಎಸ್ ಒ ಗಳು ಕೂಡ ಮೊಬೈಲ್ ಕ್ಯಾಮೆರಾ ಕ್ವಾಲಿಟಿ ಹೇಳುತ್ತದೆ.

ಡಿಸ್ಪ್ಲೇ:
ಆದಷ್ಟು ಮೊಬೈಲ್ ಗಳು 5.5 ಇಂಚಿನಿಂದ 6 ಇಂಚಿನದ್ದಿದ್ದರೆ ಉತ್ತಮ. ಇದು ಸಖತ್ ಲುಕ್ ಕೊಡುತ್ತದೆ. ಜೊತೆಗೆ ಸಿನಿಮಾ ನೋಡೊಕೆ ಒಳ್ಳೆ ಆಯ್ಕೆ.

ಆಪರೇಟಿಂಗ್ ಸಿಸ್ಟಮ್:
ನೀವು ಕೊಳ್ಳೊಕೆ ಆಗೋದೆ ಒಂದು ಐಒಎಸ್ ಮತ್ತೊಂದು ಒಸ್. ಇದರಲ್ಲಿ ಪ್ರತಿಯೊಂದು ಭಿನ್ನವಾಗಿರುತ್ತದೆ. ಹಾಗಾಗಿ ಕೊಳ್ಳುವಾಗ ಸ್ವಲ್ಪ ಚೆನ್ನಾಗಿರುವ ಆಪರೇಟಿಂಗ್ ಸಿಸ್ಟೆಂಮ್ ಇರುವ ಮೊಬೈಲ್ ಖರೀದಿ ಮಾಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss