spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಮಲಗಿದ ತಕ್ಷಣ ನಿದ್ದೆ ಬರಬೇಕೇ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…

- Advertisement -Nitte

ತುಂಬಾ ಜನರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತದೆ. ರಾತ್ರಿ ಮಲಗಿದ ತಕ್ಷಣ ನಿದ್ದೆ ಬರುವುದಿಲ್ಲ. ರಾತ್ರಿ ಸರಿಯಾಗಿ ನಿದ್ದೆ ಆಗದಿದ್ದರೆ ಬೆಳಗ್ಗೆ ಬೇಗ ಏಳಲು ಆಗುವುದಿಲ್ಲ. ಹೀಗಾಗಿ ಬೆಳಗ್ಗೆ ಯಾವ ಕೆಲಸ ಮಾಡುವುದಕ್ಕೂ ಮೂಡ್ ಇರುವುದಿಲ್ಲ. ಮನಸ್ಸು ಫ್ರೆಶ್ ಅನಿಸುವುದಿಲ್ಲ. ರಾತ್ರಿ ಮಲಗಿದ ತಕ್ಷಣ ನಿದ್ದೆ ಬರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.

  • ಪ್ರತಿದಿನವೂ ಒಂದೇ ಸಮಯಕ್ಕೆ ನಿದ್ದೆ ಮಾಡಬೇಕು. ಒಂದು ದಿನ ಬೇಗ ಮಲಗುವುದು ಮತ್ತೊಂದು ದಿನ ತಡವಾಗಿ ಮಲಗುವುದು ಮಾಡಬೇಡಿ.
  • ಮಲಗಲು 10 ನಿಮಿಷ ಇದೆ ಎನ್ನುವಾಗ ಊಟ ಮಾಡುವುದಲ್ಲ. ಮಲಗಲು ಮೂರು ಗಂಟೆ ಮೊದಲು ಊಟ ಮಾಡಿ.
  • ಮಲಗುವ 10 ನಿಮಿಷ ಮೊದಲು ಒಂದು ಕಪ್ ಹಾಲು ಸೇವಿಸಿ. ಹಾಲು ಹೊಟ್ಟೆಯನ್ನು ತಂಪಾಗಿಸಿ ನಿದ್ರೆ ಬರುವಂತೆ ಮಾಡುತ್ತದೆ.
  • ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ. ನಾನ್ ವೆಜ್ ರಾತ್ರಿ ಸೇವಿಸಬೇಡಿ. ನಾನ್ ವೆಜ್ ಜೀರ್ಣವಾಗಲು ತುಂಬಾ ಸಮಯ ಬೇಕು.
  • ಮಲಗುವ 1 ಗಂಟೆ ಮುನ್ನ ಟಿವಿ, ಮೊಬೈಲ್ ನಿಂದ ದೂರವಿರಿ. ನಿಮ್ಮಿಷ್ಟದ ಬುಕ್ ಓದಿರಿ.
  • ಕಡಿಮೆ ಧ್ವನಿಯಲ್ಲಿ ನಿಮ್ಮ ನೆಚ್ಚಿನ ಹಾಡುಗಳನ್ನು ಕೇಲಳಿ. ಮನಸ್ಸು ರಿಲಾಕ್ಸ್ ಎನಿಸುತ್ತದೆ.
  • ಕೆಲವರಿಗೆ ರಾತ್ರಿ ಮಲಗುವಾಗ ಕೂಡ ಚಹಾ, ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಚಹಾ, ಕಾಫಿ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆ ಹೆಚ್ಚುತ್ತದೆ.
  • ಕೊಬ್ಬರಿ ಎಣ್ಣೆಗೆ ಲಿಂಬು ರಸ ಸೇರಿಸಿಕೊಂಡು ಹೆಡ್ ಮಸಾಜ್ ಮಾಡಿಕೊಳ್ಳಿ. ಸುಖವಾದ ನಿದ್ದೆ ಬರುತ್ತದೆ.
  • ಮಲಗಲು 10 ನಿಮಿಷ ಮೊದಲು ಧ್ಯಾನ ಮಾಡಿ. ನನಗೆ ಚೆನ್ನಾಗಿ ನಿದ್ದೆ ಬರುತ್ತದೆ, ನಾಳೆ ಬೇಗ ಏಳುತ್ತೇನೆ ಎಂದು ನಿಮ್ಮ ಮನಸ್ಸಿಗೆ ಮನವರಿಕೆ ಮಾಡಿಕೊಡಿ.
  • ನೀವು ಮಲಗುವ ಕೋಣೆಯ ವಾತಾವರಣ ಹಿತವಾಗಿರಲಿ. ಜಾಸ್ತಿ ಗಾಳಿಯೂ ಬೇಡ, ಜಾಸ್ತಿ ಬಿಸಿಯಾಗಿಯು ಇರುವುದು ಬೇಡ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss