Wednesday, August 17, 2022

Latest Posts

ನಿಮ್ಮ ಮನೆಯಲ್ಲಿ ಎಲ್ಲರೂ ಟಿವಿ ನೋಡುತ್ತಾ ಊಟ ಮಾಡುತ್ತೀರಾ? ಹಾಗಿದ್ದರೆ ಇದನ್ನು ನೀವು ಓದಲೇಬೇಕು..

ನಮ್ಮ ಬಾಲ್ಯದಲ್ಲಿ ನಾವೆಲ್ಲಾ ಕುಟುಂಬಸ್ಥರು ಒಟ್ಟಿಗೆ ನೆಲದ ಮೇಲೆ ಕೂತು ತಿಂದು ಅಭ್ಯಾಸವಾಗಿತ್ತು. ಆದರೆ ಈಗಿನ ಕಾಲದಲ್ಲಿ ಊಟ ಮಾಡುವಾಗ ಯಾರೂ ಕೂಡ ಒಬ್ಬರಿಗೋಸ್ಕರ ಕಾಯುವ ಪ್ರಮಯವೇ ಬಂದಿಲ್ಲ. ಎಲ್ಲರೂ ಟಿವಿ ಅಥವಾ ಮೊಬೈಲ್ ಮುಂದೆ ಬ್ಯುಸಿಯಾಗಿ ಊಟ ಮಾಡುತ್ತಾರೆ. ಆದರೆ ಇದರಿಂದ ಏನೆಲ್ಲಾ ತೊಂದರೆ ಇದೆ ಗೊತ್ತಾ?

ಹೆಚ್ಚು ತಿನ್ನೋದು: ಟಿವಿ, ಮೊಬೈಲ್ ನೋಡಿಕೊಂಡು ಊಟ ಮಾಡುವುದರಿಂದ ನಾವೆಷ್ಟು ಊಟ ಸೇವಿಸಿದ್ದೇವೆ ಎನ್ನುವುದರ ಕಡೆ ಗಮನವಿರುವುದಿಲ್ಲ. ಇದು ನಮ್ಮನ್ನು ಹೆಚ್ಚು ಆಹಾರ ಸೇವಿಸುವುದಕ್ಕೆ ಕಾರಣವಾಗುತ್ತದೆ.

ತೃಪ್ತಿ: ಊಟ ಮಾಡುವಾಗ ನಿಮ್ಮ ಗಮನ ಬೇರೆಡೆ ಇದ್ದರೆ ಆಹಾರದಲ್ಲಿ ತೃಪ್ತಿ ಇರುವುದಿಲ್ಲ. ಹಾಗಾಗಿ ಊಟದ ಸಮಯದಲ್ಲಿ ಎರಡೆರೆಡು ಕೆಲಸಗಳನ್ನು ಮಾಡಬಾರದು.

ಜಂಕ್ ಫುಡ್: ಊಟದ ಕಡೆ ಗಮನ ಇಲ್ಲದಿರುವಾಗ ಮತ್ತೆ ಮತ್ತೆ ಏನಾದರೂ ತಿನ್ನಲೇ ಬೇಕು ಎಂಬ ಬಯಕೆಯಾಗುತ್ತದೆ. ಈ ವೇಳೆ ಮತ್ತೆ ಒಂದಷ್ಟು ಜಂಕ್ ಫುಡ್ ಸೇವಿಸೋದು ಅಭ್ಯಾಸವಾಗಿಬಿಡುತ್ತದೆ.

ಆಲಸ್ಯ: ಟಿವಿ ನೋಡಿಕೊಂಡು ಊಟ ಮಾಡುವುದರಿಂದ ನಮ್ಮ ಮೆಟಬಾಲಿಸಮ್ ರೇಟ್ ಕಡಿಮೆಯಾಗುತ್ತದೆ. ಇದು ನಮ್ಮನ್ನು ಆಲಸಿಗಳನ್ನಾಗಿ ಮಾಡುತ್ತದೆ.

ಬೊಜ್ಜು: ಊಟ ಮಾಡುವಾಗ ಟಿವಿ ನೋಡುವುದರಿಂದ ಹೊಟ್ಟೆಯಲ್ಲಿ ಕೊಬ್ಬು ಶೇಕರಣೆಯಾಗಿ ಬೊಜ್ಜಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಮೊದಲು ಊಟ ಆಮೇಲೆ ಟಿವಿ ಅನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!