Wednesday, July 6, 2022

Latest Posts

ಪ್ರತಿದಿನ ಹೈ ಹೀಲ್ಸ್‌ ಚಪ್ಪಲಿ ಧರಿಸುತ್ತೀರಾ? ಹಾಗಿದ್ರೆ ತಪ್ಪದೇ ಇವುಗಳನ್ನು ಮಾಡಿ..

ಕೆಲ ಮಹಿಳೆಯರು ಎಲ್ಲ ರೀತಿಯ ಡ್ರೆಸ್‌ಗೂ ಹೈ ಹೀಲ್ಸ್ ಚಪ್ಪಲಿ ಧರಿಸುತ್ತಾರೆ. ಅದರಲ್ಲೂ ಸ್ವಲ್ಪ ಕುಳ್ಳಗಿದ್ದರಂತೂ ಮುಗಿಯಿತು.. ಅವರ ಚಪ್ಪಲಿ ಕಲೆಕ್ಷನ್‌ನಲ್ಲಿ ಇರೋದು ಬರೀ ಹೈ ಹೀಲ್ಸ್‌ಗಳೇ. ಹೈ ಹೀಲ್ಸ್‌ ಹಾಕಿದ್ರೆ ಎತ್ತರವಾಗಿ ಚೆನ್ನಾಗಿ ಕಾಣೋದು ನಿಜ. ಆದರೆ ಪ್ರತಿ ದಿನ ಹೈ ಹೀಲ್ಸ್‌ ಧರಿಸಿದರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀಳುವುದು ಗ್ಯಾರೆಂಟಿ. ನಿಮ್ಮಿಂದ ಹೈ ಹೀಲ್ಸ್‌ ಚಪ್ಪಲಿ ಬಿಡುವುದಕ್ಕೆ ಆಗುವುದಿಲ್ಲ ಎಂಬುದಾದರೆ ತಪ್ಪದೇ ಇವುಗಳನ್ನಾದರೂ ಮಾಡಿ..

ಸ್ಟ್ರೆಚ್ಚಿಂಗ್:
ದಿನವಿಡೀ ಹೈ ಹೀಲ್ಸ್ ಚಪ್ಪಲಿ ಧರಿಸಿದ್ದರೆ ಆಗಾಗ ನಿಮ್ಮ ಸ್ನಾಯುಗಳನ್ನು ಮತ್ತು ಪಾದಗಳನ್ನು ಹಿಗ್ಗಿಸಿ ಅಂದರೆ ಸ್ಟ್ರೆಚ್ಚಿಂಗ್‌ ಕಸರತ್ತುಗಳನ್ನು ಮಾಡಿ..

ಲೆದರ್‌ :
ಒಳಗಡೆ ಲೆದರ್‌ ಇರುವಂಥ ಹೈ ಹೀಲ್ಸ್  ಚಪ್ಪಲಿ ಬಳಸಿ, ಇದರಿಂದ ನಡೆಯುವಾಗ ಸ್ಲಿಪ್ ಆಗುವುದಿಲ್ಲ.
ಕಂಫರ್ಟ್‌ ಆಗಿ ಓಡಾಡಬಹುದು.

ತುಂಬಾ ಎತ್ತರ ಬೇಡ:
2 ಇಂಚಿಗಿಂತ ಎತ್ತರದ ಹೀಲ್ಡ್ ಧರಿಸುವುದನ್ನು ಕಡಿಮೆ ಮಾಡಿ. ಆದಷ್ಟು ಕಡಿಮೆ ಎತ್ತರದ ಹೈ ಹೀಲ್ಸ್ ಧರಿಸಿ. ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ಒಂದು ಪಾದದ ತುದಿ:
ನಿಮ್ಮ ಹೈ ಹೀಲ್ಸ್‌ ತೆಗೆದಿಟ್ಟು ಒಂದು ಪಾದದ ತುದಿಯಲ್ಲಿ ನಿಂತುಕೊಳ್ಳಿ. ಪಾದಗಳು ರಿಲ್ಯಾಕ್ಸ್‌ ಆಗುತ್ತವೆ.

ಕಾಲ್ಬೆರಳು:
ನೆಲದ ಮೇಲೆ ಏನಾದರೂ ವಸ್ತುಗಳನ್ನು ಹಾಕಿಕೊಂಡು ಅದನ್ನು ನಿಮ್ಮ ಕಾಲ್ಬೆರಳಿನಿಂದ ತೆಗೆದುಕೊಳ್ಳಲು ಪ್ರಯತ್ನಿಸಬೇಕು.

ಕೂರುವಾಗ ಬಿಚ್ಚಿಡಿ:
ತುಂಬಾ ಹೊತ್ತು ಹೈ ಹೀಲ್ಡ್‌ ಧರಿಸಬೇಡಿ, ಕೂರುವಾಗ ಬಿಚ್ಚಿಡಿ. ತುಂಬಾ ಪಾಯಿಂಟ್ ಇರುವ ಹೀಲ್ಡ್‌ ಬಳಸಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss