PARENTING | ಮಕ್ಕಳ ಮೇಲೆ ಕೂಗಾಡ್ತೀರಾ? ಹಾಗಿದ್ರೆ ಇದನ್ನು ಓದಲೇಬೇಕು..

ಹೇಳಿದ್ ಮಾತೇ ಕೇಳೋದಿಲ್ಲ, ಮುಟ್ಟಬೇಡ ಅಂದಿದ್ದನ್ನೇ ಮುಟ್ಟೋದು, ಮಾಡಬೇಡ ಅಂದಿದ್ದನ್ನೇ ಮಾಡೋದು, ಈ ರೀತಿ ಮಾಡೋ ಮಕ್ಕಳಿಗೆ ಕೂಗಾಡದೇ ಇದ್ದರೆ ಹೇಗೆ? ಯಾವುದಾದೆಊ ಒಂದು ವಿಷಯದಲ್ಲಾದರೂ ಅವರಿಗೆ ಭಯ ಇಡಿಸಬೇಕು, ಮನೆಯಲ್ಲಿ ಒಬ್ಬರಾದರೂ ಸ್ಟ್ರಿಕ್ಟ್ ಆಗಿರಬೇಕು..

ಇದು ಪ್ರತೀ ಮನೆಯ ಕಥೆ! ಆದರೆ ಮಕ್ಕಳ ಮೇಲೆ ಕೂಗಾಡೋದು ರೇಗೋದು, ಯಾರದ್ದೋ ಸಿಟ್ಟು ತಂದು ಅವರ ಮೇಲೆ ಹಾಕೋದು, ಇದೆಲ್ಲಾ ಈಗ ಏನೂ ಅಲ್ಲ ಎನಿಸಬಹುದು, ಆದರೆ ಮಕ್ಕಳ ಮಾನಸಿಕ ಬೆಳವಣಿಗೆ ಅವರ ಗುಣಗಳು ಎಲ್ಲದರ ಮೇಲೂ ಇದು ಪರಿಣಾಮ ಬೀರುತ್ತದೆ.

5 Ways Yelling Hurts Kids in the Long Runಏನೆಲ್ಲಾ ಪರಿಣಾಮ ಬೀರಬಹುದು?
ಮಕ್ಕಳ ಮೇಲೆ ರೇಗುವುದು, ನಿಮ್ಮ ಸಿಟ್ಟನ್ನು ಅವರ ಮೇಲೆ ಹೇರುವುದರಿಂದ ಆ ಕ್ಷಣಕ್ಕೆ ಅವರು ಸುಮ್ಮನಾಗಬಹುದು, ಆದರೆ ಮನಸ್ಸಿನಲ್ಲಿ ಕೆಲ ವಿಷಯಗಳು ಸದಾ ಉಳಿದುಬಿಡುತ್ತವೆ. ಆಂಕ್ಸೈಟಿ, ಒತ್ತಡ, ಕಾನ್ಫಿಡೆನ್ಸ್ ಕೊರತೆ, ಸಿಟ್ಟು, ಯಾವಾಗಲೂ ಕೋಪ, ಮೊಂಡಾಗುವುದು, ಶಾಲೆಯಲ್ಲಿ ಇತರ ಮಕ್ಕಳ ಮೇಲೆ ಕೂಗುವುದು ಈ ಎಲ್ಲ ಸಮಸ್ಯೆಗಳು ಬಾಧಿಸುತ್ತವೆ. ಮಕ್ಕಳಿಗೆ ನೀವು ಆಗಾಗ ಬೈಯುತ್ತಲೇ ಇದ್ದರೆ ಅದು ಮಾಮೂಲು ಎನಿಸುತ್ತದೆ, ನಾನು ಯಾರಿಗಾದರೂ ಬೈಯಬಹುದು, ಅದು ತಪ್ಪಲ್ಲ ಎಂದು ಅವರು ಅರ್ಥೈಸಿಕೊಳ್ಳುತ್ತಾರೆ.
The Harmful Effects of Yelling At Kids and How to Quit Yelling – Dad Central ಸಿಟ್ಟು ಬಂದು ಕೂಗಬೇಕು ಎನಿಸದಾಗ ಏನು ಮಾಡಬಹುದು?

ನಿಮಗೆ ಸಿಟ್ಟು ಬಂದಾಗ ಗೊತ್ತಾಗೋದಿಲ್ವಾ? ತಾಳ್ಮೆ ಮೀರಿದೆ, ಬೈತೇನೆ ಎನಿಸಿದ ತಕ್ಷಣ ದೀರ್ಘ ಉಸಿರಾಟ ಮಾಡಿ, ಮಗುವಿಗೆ ಕೂಗಾಡಿ ಪ್ರಯೋಜನ ಇಲ್ಲ, ಇದು ಕೆಟ್ಟ ಬೆಳವಣಿಗೆಯಾಗಬಹುದು ಎಂದು ಆಲೋಚಿಸಿ.

Parents, yelling may harm kids more than you realizeನಿಮ್ಮ ಭಾವನೆಗಳ ಬಗ್ಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಬಿಡಿಸಿ ಹೇಳಿ, ಖುಷಿ, ದುಃಖ, ಸಿಟ್ಟು ಎಲ್ಲ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ. ಭಾವನೆಗಳನ್ನು ಮುಕ್ತವಾಗಿ ಬಿಚ್ಚಿಡುವುದು ಉತ್ತಮ ಎಂದು ತೋರಿಸಿಕೊಡಿ.

6 Reasons Why Yelling at Kids Doesn't Actually Workನಿಜವಾಗ್ಯೂ ಮಕ್ಕಳು ಕೆಟ್ಟ ಅಭ್ಯಾಸ ಕಲಿಯುತ್ತಿದ್ದಾರೆ ಎಂದರೆ ದನಿಯೇರಿಸಬೇಡಿ, ಆದರೆ ಗಟ್ಟಿಯಾದ ದನಿಯಲ್ಲಿ ನಿಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿ.

Does Yelling Frighten Kids? It Depends On How You Yellಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ಹೇಳಿ ಭಯಪಡಿಸಿದರೆ ಉಪಯೋಗ ಇಲ್ಲ, ಆಟ ಆಡಬೇಕು ಎಂದು ಕೊಟ್ಟ ಆಟಿಕೆಯನ್ನು ಅವರು ಮುರಿಯಲು ಹೋದಾಗ ಮುರಿದರೆ ಮತ್ತೆ ಆಟ ಆಡೋಕೆ ಹೊಸತು ಸಿಗೋದಿಲ್ಲ ಎಂದು ಹೇಳಿ ಅದನ್ನು ಬಿಟ್ಟು ಆಟಿಕೆ ಕಿತ್ತು ಎತ್ತಿಡಬೇಡಿ, ಹೆದರಿಸಿದಷ್ಟು ಮಕ್ಕಳು ಮೊಂಡರಾಗುತ್ತಾರೆ.

How to Keep Your Cool and Stop Yelling at Your Kids - Christian Parentingಮಕ್ಕಳಿಗೆ ರೊಟೀನ್ ಫಿಕ್ಸ್ ಮಾಡಿ, ಅವರ ಊಟ, ನಿದ್ದೆ, ಸ್ನಾನ ಎಲ್ಲಕ್ಕೂ ಸಮಯ ಫಿಕ್ಸ್ ಮಾಡಿ, ಆಗ ರೊಟೀನ್‌ಗೆ ತಕ್ಕಂತೆ ನಡೆದುಕೊಂಡರೆ ಸಿಟ್ಟು ಬರುವ ಪ್ರಮೇಯವೇ ಇಲ್ಲ.

ನೆನಪು ಮಾಡಿಕೊಳ್ಳಿ, ನೀವು ಪೋಷಕರಾಗುತ್ತೀರಿ ಎಂದು ತಿಳಿದಾಗ ಎಷ್ಟು ಖುಷಿಪಟ್ಟಿದ್ದೀರಿ?ಹೊಟ್ಟೆಯಲ್ಲಿದ್ದಾಗ ನಿನಗೆ ನೋವಾಗದಂತೆ ಕಾಪಾಡುತ್ತೇವೆ ಎಂದು ಆಣೆ ಮಾಡಿದ್ದೀರಿ, ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿ, ಏನೇ ಮಾಡಲಿ ಕಡೆಗೆ ಅವರು ಪುಟ್ಟ ಮಕ್ಕಳು ಎನ್ನುವುದು ನೆನಪಿರಲಿ. ನೀವು ಬೈದ ಬೈಗುಳ ವಾಪಾಸ್ ನಿಮಗೇ ಬರುವ ದಿನ ದೂರವಿಲ್ಲ!

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!