ಸಾಮಾಗ್ರಿಗಳು
ದಪ್ಪ ಹಾಲು – 1 ಲೀಟರ್
ಸಕ್ಕರೆ – ಅರ್ಧ ಕಪ್
ಕಾಲು ಕಪ್ – ಹಾಲಿನ ಪುಡಿ
ಕಾಲು ಕಪ್ – ತಾಜಾ ಕೆನೆ
ಅರ್ಧ ಟೀಸ್ಪೂನ್ – ಏಲಕ್ಕಿ ಪುಡಿ
ಒಂದು ಹಿಡಿ – ಬಾದಾಮಿ ಮತ್ತು ಪಿಸ್ತಾ
ಮಾಡುವ ವಿಧಾನ
ಮೊದಲು ಹಾಲಿನ ಪುಡಿ ಮತ್ತು ತಾಜಾ ಕ್ರೀಮ್ ಅನ್ನು ಮಿಕ್ಸಿಂಗ್ ಬೌಲ್‌ನಲ್ಲಿ ಹಾಕಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ. ಈಗ ಹಾಲನ್ನು ಒಂದು ಪಾತ್ರೆಯಲ್ಲಿ ಒಲೆಯ ಮೇಲೆ ಇಡಿ. ಕಡಿಮೆ ಉರಿಯಲ್ಲಿ ಅರ್ಧ ಪ್ರಮಾಣಕ್ಕೆ ಬರುವವರೆಗೆ ಕುದಿಸಿ.
ಇದು ಸುಮಾರು 30 ರಿಂದ 40 ನಿಮಿಷಗಳನ್ನು ಬೇಕಾಗುತ್ತದೆ. ಹಾಲು ದಪ್ಪಗಾದ ನಂತರ, ಸಕ್ಕರೆ, ಏಲಕ್ಕಿ ಪುಡಿ ಮತ್ತು ಈ ಹಿಂದೆ ಬೆರೆಸಿದ ಹಾಲಿನ ಪುಡಿ ಮಿಶ್ರಣವನ್ನು ಸೇರಿಸಿ ಮತ್ತು ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.
ಸಕ್ಕರೆ ಕರಗಿದ ಬಳಿಕ ಒಲೆ ಆಫ್ ಮಾಡಿ ಬೌಲ್ನ್ನು ತೆಗೆದು ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ಸಣ್ಣ ಕಪ್‌ಗಳು ಅಥವಾ ಕುಲ್ಫಿ ಅಚ್ಚುಗಳನ್ನು ತೆಗೆದುಕೊಂಡು ತಣ್ಣಗಾದ ಹಾಲಿನ ಮಿಶ್ರಣವನ್ನು ಅವುಗಳಲ್ಲಿ ಸುರಿಯಿರಿ. ಅವುಗಳ ಮೇಲೆ ಪಿಸ್ತಾ ಹಾಗೂ ಬಾದಾಮಿ ಚಕ್ಕೆಗಳಿಂದ ಅಲಂಕರಿಸಿ.
ಬಳಿಕ ಅವುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿ. ಬಳಿಕ ಅಲ್ಯೂಮಿನಿಯಂ ಫಾಯಿಲ್ ಮಧ್ಯದಲ್ಲಿ ಒಂದು ಸಣ್ಣ ಸೀಳನ್ನು ಕತ್ತರಿಸಿ ಮತ್ತು ಎಲ್ಲಾ ಕಪ್‌ಗಳು ಅಥವಾ ಅಚ್ಚುಗಳಲ್ಲಿ ಕೋಲುಗಳನ್ನು ಇಡಿ. ಇದಾದನಂತರ ಅದನ್ನು 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ರೆಫ್ರಿಜರೇಟರ್‌ನಲ್ಲಿ ಇಡಿ. ಕುಲ್ಫಿ ಗಟ್ಟಿಯಾದ ನಂತರ, ಅದನ್ನು ಫ್ರೀಡ್ಜ್ನಿಂದ ತೆಗೆದು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇರಿಸಿ ನಂತರ ಕುಲ್ಫಿ ತಿನ್ನೋಕೆ ರೆಡಿ