Thursday, August 11, 2022

Latest Posts

ನರ್ಸ್ ಕಪಾಳಕ್ಕೆ ಹೊಡೆದ ವೈದ್ಯ: ಆಸ್ಪತ್ರೆ ಮುಂದೆ ನರ್ಸ್‌ಗಳ ಪ್ರತಿಭಟನೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಿರಿಯ ವೈದ್ಯರೊಬ್ಬರು ಕರ್ತವ್ಯ ನಿರತ ನರ್ಸ್‌ಗೆ ಕಪಾಳಮೋಕ್ಷ ಮಾಡಿದ್ದು, ನರ್ಸ್‌ಗಳು ಪ್ರತಿಭಟನೆಗೆ ಇಳಿದಿದ್ದಾರೆ.
ಪ್ರಯಾಗ್‌ರಾಜ್‌ನ ಮೋತಿಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ದಾದಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ಉಸ್ತುವಾರು ಅಧೀಕ್ಷಕರು ಪ್ರತಿಕ್ರಿಯೆ ನೀಡಿದ್ದು, ಕಪಾಳಕ್ಕೆ ಹೊಡೆದ ವೈದ್ಯರ ಬಳಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕಿರಿಯ ವೈದ್ಯರು ಹಾಗೂ ನರ್ಸ್ ಒಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನರ್ಸ್‌ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಕಿರಿಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ನರ್ಸ್‌ಗಳು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss