ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ‘ಡಾಕ್ಟರ್ ಸ್ಟ್ರೇಂಜ್‌ʼ ಖ್ಯಾತಿಯ ನಟಿ ಜರಾಗೆ 8 ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮಾರ್ವೆಲ್‌ ಚಿತ್ರ ಸರಣಿಯ “ಡಾಕ್ಟರ್ ಸ್ಟ್ರೇಂಜ್‌ʼ ಖ್ಯಾತಿಯ ಹಾಲಿವುಡ್‌ ನಟಿ ನಟಿ ಜರಾ ಫಿಥಿಯಾನ್ ಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಜರಾ ಪಿಥಿಯಾನ್‌ ಹಾಗೂ ಆಕೆಯ ಪತಿ ವಿಕ್ಟರ್ ಮಾರ್ಕೆ 2005 ಮತ್ತು 2008 ರ ನಡುವೆ 14 ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಗಳು ದಾಖಲಾಗಿವೆ. 15 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಜರಾ ಪತಿ ವಿಕ್ಟರ್ ಮಾರ್ಕೆಗೆ 14 ವರ್ಷ ಶಿಕ್ಷೆ ನೀಡಲಾಗಿದೆ.

ಜರಾ ಫಿಥಿಯನ್ ಯಾರು?
ಬ್ರಿಟನ್‌ ಮೂಲದ 37 ವರ್ಷ ವಯಸ್ಸಿನ ಹಾಲಿವುಡ್ ತಾರೆ ಜಾರಾ ಫಿಥಿಯಾನ್ ಸಾಹಸ ಪ್ರದರ್ಶಕಿ ಮತ್ತು ಸಮರ ಕಲಾವಿದೆಯಾಗಿ ಖ್ಯಾತಿ ಪಡೆದಿದ್ದಾರೆ. ನಟಿ 13 ಬಾರಿ ಮಲ್ಟಿ ಸ್ಟೈಲ್ ವರ್ಲ್ಡ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ ಚಾಂಪಿಯನ್ ಆಗಿದ್ದ ಸಾಧಕಿ. ಡಾಕ್ಟರ್ ಸ್ಟ್ರೇಂಜ್, ಟ್ರಾನ್ಸಿಟ್ 17, ಟ್ರೈಬಲ್ ಗೆಟ್ ಔಟ್ ಅಲೈವ್ ಮತ್ತು ವಾರಿಯರೆಸ್‌ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!