ಹೊಸ ದಿಗಂತ ವರದಿ, ಧಾರವಾಡ:
ಎಸ್ಡಿಎಂ ಆಸ್ಪತ್ರೆ ವೈದ್ಯರು 8 ವರ್ಷದ ಮಗುವಿನ ಹೊಟ್ಟೆಯಲ್ಲಿನ ಗಡ್ಡೆ ಶಸ್ತ್ರ ಚಿಕಿತ್ಸೆಯಿಂದ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗದಗಿನ ಎಂಟು ವರ್ಷದ ಮಮತಾ ಎಂಬ ಹೆಣ್ಣು ಮಗು ಹೊಟ್ಟೆಯಲ್ಲಿ ಗೆಡ್ಡೆ ಚಿಕಿತ್ಸೆಗೆ ಸತ್ತೂರಿನಲ್ಲಿನ ಎಸ್ಡಿಎಂ ಆಸ್ಪತ್ರೆಗೆ ಈಚೇಗೆ ದಾಖಲಾಗಿತ್ತು.
ಶಸ್ತ್ರ ಚಿಕಿತ್ಸೆಯಿಂದ ಗೆಡ್ಡೆ ತೆಗೆಯಲು ಬಾರದಂತೆ ಮಗುವಿನ ಹೊಟ್ಟೆಯಲ್ಲಿ ವ್ಯಾಪಕವಾಗಿ ಪಸರಿಸಿತ್ತು. ಈ ಕಾರಣಕ್ಕೆ ಕಿಮೋಥೆರಫಿ ಕೊಡಲು ನಿರ್ಧರಿಸಿದೆ.
ಯಾವುದೇ ಅಡ್ಡ ಪರಿಣಾಮ ಉಂಟಾಗದoತೆ ಎಸ್ಡಿಎಂ ವೈದ್ಯರು ಬರೋಬ್ಬರಿ ಮೂರು ಭಾರಿ ಮಗುವಿಗೆ ಕಿಮೋಥೆರಫಿ ನೀಡಿದ್ದಾರೆ.
ಕಿಮೋಥೆರೆಫಿ ಬಳಿಕ ಶೇ.70ರಷ್ಟು ಗಡ್ಡೆ ಕಡಿಮೆಯಾದ ನಂತರ ಮಗುವಿಗೆ ಶಸ್ತçಚಿಕಿತ್ಸೆ ಮಾಡುವುದರ ಮೂಲಕ ಗೆಡ್ಡೆ ಹೊರಗೆ ತೆಗೆದಿದೆ.
ಡಾ. ಪ್ರಶಾಂತ ಜೂಲ್ಫಿ ಕಿಮೋಥೆರಫಿ, ಡಾ. ಅನಿಲ ಹಲಗೇರಿ, ಡಾ. ಅಕ್ಷಯ ಕಲವಂತ, ಅರವಳಿಕೆ ತಜ್ಞ ರಾಘವೇಂದ್ರ ರಾವ್, ಡಾ. ಇಮ್ರಾನ್, ಡಾ.ವಿಜಯ ಕುಲಕರ್ಣಿ ಯಶಸ್ವಿ ಶಸ್ತçಚಿಕಿತ್ಸೆ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ನಂತರ ಮಗು ಚೇತರಿಸಿಕೊಂಡಿದೆ. ಎಸ್ಡಿಎಂ ವಿವಿ ಉಪಕುಲಪತಿ ಡಾ.ನಿರಂಜನಕುಮಾರ ಚಿಕಿತ್ಸೆಗೆ ಮಾಡಿದ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.