ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಸಮಯದಲ್ಲಿ ಏನೇ ತಿಂದರೂ ವಾಂತಿ ಬಂದಂತಾಗುತ್ತದೆಯೇ? ಹಾಗಿದ್ದರೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ… 

ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವಿನ ಜೊತೆಗೆ ಕೆಲವರಿಗೆ ತಲೆನೋವು, ವಾಂತಿ, ಹೊಟ್ಟೆ ತೊಳೆಸುವುದು, ಅಜೀರ್ಣ, ಬೆನ್ನು ನೋವು ಕೂಡ ಆಗುತ್ತದೆ. ಅದರಲ್ಲೂ ಏನನೇ ತಿಂದರೂ ಪೀರಿಯಡ್ಸ್ ವೇಳೆ ವಾಂತಿ ಬಂದಂತಾಗುವ ಸಮಸ್ಯೆ ಹಲವು ಮಹಿಳೆಯರಿಗಿದೆ. ಇಂತಹ ಸಮಸ್ಯೆಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಗುಳಿಗೆ(ಮಾತ್ರೆ) ತೆಗೆದುಕೊಳ್ಳುವುದಕ್ಕಿಂತ ಮನೆ ಮದ್ದು ಟ್ರೈ ಮಾಡುವುದು ಉತ್ತಮ.

ಲವಂಗ:
ನೀವು ಏನಾದರೂ ತಿಂದ ತಕ್ಷಣ ಒಂದು ಲವಂಗದ ಚೂರನ್ನು ಬಾಯಕ್ಕಿ ಹಾಕಿಕೊಂಡು 100 ಹೆಜ್ಜೆ ಓಡಾಡಬೇಕು. ಆಗ ತಿಂದಿರುವುದು ಸರಿಯಾಗಿ ಜೀರ್ಣವಾಗುತ್ತದೆ. ವಾಂತಿ ಬಂದಂತಾಗುವುದು ಕಡಿಮೆ ಆಗುತ್ತದೆ.

ಮಜ್ಜಿಗೆ, ಶುಂಠಿ:
ದಿನದಲ್ಲಿ ಮೂರು ಹೊತ್ತು ಒಂದು ಕಪ್ ಮಜ್ಜಿಗೆಗೆ ಶುಂಠಿ ಚಿಕ್ಕ ತುಂಡನ್ನು ಜಜ್ಜಿ ಹಾಕಿಕೊಂಡು ಅದನ್ನು ಕುಡಿದರೆ ಹೊಟ್ಟೆನೋವು ಕೂಡ ಹೋಗುತ್ತದೆ. ವಾಂತಿ ಬಂದಂತಾಗುವುದೂ ಸಹ ನಿಲ್ಲುತ್ತದೆ.

ತುಳಸಿ:
ತುಳಸಿ ಅಜೀರ್ಣವನ್ನು ಹೋಗಲಾಡಿಸುತ್ತದೆ. ಮಸಾಲೆಯುಕ್ತ ಆಹಾರಗಳ ಸೇವನೆ ನಂತರ ನಾಲ್ಕೈದು ತುಳಸಿ ಎಲೆಗಳನ್ನು ಸೇವಿಸಿದರೆ ವಾಂತಿ ಬಂದಂತಾಗುವುದು ನಿಲ್ಲುತ್ತದೆ.

ಪುದೀನಾ:
ಪೀರಿಯಡ್ಸ್ ಸಮಯದಲ್ಲಿ ಪುದೀನಾ ಸೊಪ್ಪನ್ನು ಆಗಾಗ ತಿನ್ನತ್ತಲೇ ಇರಿ.  ಇದು ಆರೋಗ್ಯಕ್ಕೂ ಒಳ್ಳೆಯದು. ವಾಂತಿ ಬಂದಂತಾಗುವುದು ಕೂಡ ನಿಲ್ಲುತ್ತದೆ.

ಬಿಸಿ ನೀರು:
ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ಬಿಸಿ ನೀರನ್ನು ಸೇವಿಸುತ್ತಿರಿ. ಬಿಸಿ ನೀರು ಸೇವನೆ ಜೀರ್ಣ ಕ್ರೀಯೆಯನ್ನು ಸರಾಗಮಾಡುತ್ತದೆ.

ಲಿಂಬು ಬೀಜ:
2 ಲಿಂಬು ಜೀಜವನ್ನು ಜಜ್ಜಿ ಅರ್ಧ ಕಪ್ ನೀರಿಗೆ ಹಾಕಿಕೊಂಡು ಕುಡಿಯುವುದರಿಂದ ವಾಂತಿ ಬಂದಂತಾಗುವುದು ನಿಲ್ಲುತ್ತದೆ

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss