Saturday, August 13, 2022

Latest Posts

ಮಲಗಿದ ತಕ್ಷಣ ಕೆಮ್ಮು ಬರುತ್ತದೆಯೇ? ಗಂಟಲಲ್ಲಿ ಕಫ ಕಟ್ಟಿರುತ್ತದೆ… ಈ ಮನೆ ಮದ್ದು ಟ್ರೈ ಮಾಡಿ…

ಕೆಲವೊಬ್ಬರಿಗೆ ನೆಗಡಿಯಾಗಬೇಕು, ಜ್ವರ ಬರಬೇಕು, ಕೆಮ್ಮೇ ಇರಬೇಕು ಎಂಬುದಿಲ್ಲಿ. ಕಫ ಯಾವಾಗಲು ಗಂಟಲಲ್ಲಿಯೇ ಇರುತ್ತದೆ. ಅದರಲ್ಲೂ ರಾತ್ರಿ ಮಲಗಿದಾಗ ಈ ಕಫ ಕಟ್ಟಉವ ಸಮಸ್ಯೆ ಹೆಚ್ಚಾಗಿ ಕೆಮ್ಮು ಬರುತ್ತದೆ.  ಮತ್ತು ಕೆಲವೊಮ್ಮೆ ಉಸಿರಾಟದ ತೊಂದರೆಯಾಗುತ್ತದೆ. ಹೀಗಾಗಿ ಕಫವನ್ನು ಸರಿಯಾಗಿ ಕರಗಿಸಿಕೊಳ್ಳಬೇಕು. ಅದಕ್ಕೆ ಔಷಧಿ ಮಾಡದೇ ಬಿಟ್ಟರೆ ಅದರಿಂದ ಮತ್ತೊಂದು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಮಗೆ ಕಫದ ಸಮಸ್ಯೆ ಇದ್ದರೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ.

ಶುಂಠಿ:
ಶುಂಠಿಯನ್ನು ಚೆನ್ನಾಗಿ ಜಜ್ಜಿ ಅದನ್ನು ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಬೆಲ್ಲಹಾಕಿಕೊಂಡು ದಿನಕ್ಕೆ ಮೂರು ಸಲಿ ಕುಡಿದರೆ ಬೇಗ ಕಫ ಕರಗುತ್ತದೆ. ಇದನ್ನು ಒಂದು ವಾರ ಮಾಡದರೆ ಸಾಕು. ಈ ರೀತಿ ಮಾಡಿದರೆ ರಾತ್ರಿ ಕೆಮ್ಮು ಬರುವುದಿಲ್ಲ.

ಜೇನು ತುಪ್ಪ:
ಶುಂಠಿ ರಸವನ್ನು ತೆಗದು ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ಸೇವಿಸಬೇಕು. ಹೀಗೆ ಮಾಡಿದರೂ ಬೇಗ ಕಫ ಕರಗುತ್ತದೆ. ರಾತ್ರಿ ಮಲಗುವ ಮೊದಲು ಮಾಡಿ.

ಕೆಂಪು ಕಲ್ಲುಸಕ್ಕರೆ:
ಲಿಂಬು ರಸಕ್ಕೆ ಕೆಂಪು ಕಲ್ಲುಸಕ್ಕರೆಯನ್ನು ಮಿಶ್ರಣ ಮಾಡಿ ಅದನ್ನು ಕುದಿಸಬೇಕು. ಅದು ಚೆನ್ನಾಗಿ ಕುದ್ದ ಮೇಲೆ ಅಂಟು ಅಂಟು ಬರುತ್ತದೆ. ಅದನ್ನು ದಿನದಲ್ಲಿ ಆಗ ಆಗ ಸೇವಿಸಬೇಕು. ಕಫ ಕರಗುತ್ತದೆ.

ಈರುಳ್ಳಿ:
ಈರುಳ್ಳಿಯನ್ನು ಕೆಂಡದಲ್ಲಿ ಕಪ್ಪಾಗುವಂತೆ ಸುಡಬೇಕು. ನಂತರ ಅದನ್ನು ಬೆಲ್ಲ ಹಚ್ಚಿಕೊಂಡು ಸೇವಿಸಬೇಕು. ಹೀಗೆ ಮಾಡಿದರೆ ಕೆಮ್ಮೂ, ನೆಗಡಿ ಕಡಿಮೆ ಆಗುತ್ತದೆ. ಮತ್ತು ಕಫ ಕರಗುತ್ತದೆ.

ಕಾಳು ಮೆಣಸು:
ಕಾಳು ಮೆಣಸಿನ ಪುಡಿಗೆ ಲಿಂಬು ಮತ್ತು ಜೇನುತುಪ್ಪವನ್ನು ಸೇರಿಸಿಕೊಂಡ ಹಾಗೆಯೇ ನೆಕ್ಕಿದರೆ ಕಫ ಕಡಿಮೆ ಆಗುತ್ತದೆ.

ಕುತುಂಬರಿ ಕಾಳು:
ಕುತುಂಬರಿ ಕಾಳು ಮತ್ತು ಕಾಳು ಮೆಣಸನ್ನು ನೀರಿಗೆ ಹಾಕಿ ಕುದಿಸಬೇಕು. ನಂತರ ಅದಕ್ಕೆ ಬೆಲ್ಲ ಹಾಕಬೇಕು. ಕಷಾಯ ತಣ್ಣಗಾದಮೇಲೆ ಸ್ವಲ್ಪ ಲಿಂಬು ಸೇರಿಸಿಕೊಂಡು ಕುಡಿದರೆ ಕಫ ಕಡಿಮೆ ಆಗುತ್ತದೆ.

ಬೆಂಡೆಕಾಯಿ:
ಬೆಂಡೆಕಾಯಿಯನ್ನು ಚೆನ್ನಾಗಿ ಕಟ್ ಮಾಡಿಕೊಂಡು ಅದಕ್ಕೆ ಕೆಂಪು ಕಲ್ಲು ಸಕ್ಕರೆ ಸೇರಿಸಿಕೊಂಡು ಕುದಿಸಿದರೆ ಬೆಂಡೆಕಾಯಿಯಲ್ಲಿನ ಲೋಳೆ ಅಂಶ ಬರುತ್ತದೆ. ಅದನ್ನು ದಿನದಲ್ಲಿ ೫ಕ್ಕೂ ಹೆಚ್ಚು ಹೊತ್ತು ಸೇವಿಸಿದರೆ ಬೇಗ ಕಫ ಕಡಿಮೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss