ಮಧ್ಯಾಹ್ನದ ಬಿಸಿ ಬಿಸಿ ಊಟ, ನೆರಳಿನಲ್ಲಿ ತಣ್ಣಗೆ ಬೀಸುವ ಗಾಳಿ ಮಧ್ಯೆ ಒಂದೊಳ್ಳೆ ನಿದ್ದೆ ಆಗಿಬಿಟ್ರೆ? ಇಮ್ಯಾಜಿನೇಷನ್ ನಲ್ಲೂ ಇದು ಸಖತ್ ಮಜಾ ಕೊಡುತ್ತದೆ. ಆದರೆ ಕೆಲವರು ಮಧ್ಯಾಹ್ನ ನಿದ್ದೆ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅದಕ್ಕೆ ಕಾರಣ ತೂಕ ಹೆಚ್ಚಾದೀತು ಅನ್ನೋ ಭಯ… ಮಧ್ಯಾಹ್ನ ಮಲಗಿ ಎದ್ದರೆ ತೂಕ ಹೆಚ್ಚಾಗುತ್ತದಾ?
ಮಧ್ಯಾಹ್ನ ನಿದ್ದೆ ಮಾಡೋದ್ರಿಂದಲೇ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗದು.. ತೂಕ ಹೆಚ್ಚಾಗೋಕೆ ಬಹಳ ಕಾರಣಗಳಿವೆ. ಊಟದ ನಂತರ ವಾಕ್ ಮಾಡುವ ವ್ಯಕ್ತಿ ನಿದ್ದೆ ಮಾಡೋ ವ್ಯಕ್ತಿಗಿಂತ ಹೆಚ್ಚು ಕ್ಯಾಲೋರಿ ಕರಗಿಸುತ್ತಾರೆ. ನಿದ್ದೆ ಜೊತೆಗೆ ಊಟ, ವ್ಯಾಯಾಮ ಇಲ್ಲದಿರುವುದು ತೂಕ ಹೆಚ್ಚಲು ಕಾರಣ.