ಕೆಲವರಿಗೆ ಹಳೆ ಪುಸ್ತಕ, ಬಟ್ಟೆ, ಧೂಳು ಎಲ್ಲವೂ ಅಲರ್ಜಿ. ಸ್ವಲ್ಪ ಆ ಧೂಳು ತಾಗಿದರು ಮೇ ಮೇಲೆ ಕೆಂಪು ಗುಳ್ಳೆಗಳಾಗುತ್ತವೆ. ಕೆಲವರಿಗೆ ಕಲೆ ಕೂಡ ಆಗುತ್ತದೆ. ಇಂತಹ ಅಲರ್ಜಿ ಸಮಸ್ಯೆಗೆ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲಿಯೇ ಔಷಧ ಮಾಡಿ. ಬೇಗ ಕಡಿಮೆಯೂ ಆಗುತ್ತದೆ ಮತ್ತು ಸೈಡ್ ಎಫೆಕ್ಟ್ ಕೂಡ ಇರುವುದಿಲ್ಲ.
ಕಹಿಬೇವು:
ಕಹಿಬೇವನ್ನುಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಆ ಎಣ್ಣೆಯನ್ನು ಹಚ್ಚಿಕೊಂಡ ತುರಿಕೆ ಕಡಿಮೆ ಆಗುತ್ತದೆ ಮತ್ತು ಕೆಲೆ ಕೂಡ ಇರುವುದಿಲ್ಲ.
ಭಸ್ಮ:
ಭಸ್ಮ ನೀವು ಕೇಳಿರಬಹುದು.. ಇದನ್ನು ಹಳ್ಳಿಗಳಲ್ಲಿ ಹಸುವಿನ ಸಗಣಿಯಿಂದ ತಯಾರಿಸುತ್ತಾರೆ. ಈ ಭಸ್ಮವನ್ನು ತುರಿಕೆ ಆಗುವ ಜಾಗಕ್ಕೆ ಹಚ್ಚಿಕೊಂಡು ತಿಕ್ಕಿಕೊಂಡರೆ ಅಲರ್ಜಿ ತುರಿಕೆ ಹೋಗುತ್ತದೆ.
ಗಂಧ, ಲಿಂಬು:
ಗಂಧವನ್ನು ತೇಯ್ದು ಅದಕ್ಕೆ ಲಿಂಬು ರಸವನ್ನು ಸೇರಿಸಿಕೊಂಡು ತುರಿಕೆ ಆಗುವ ಜಾಗಕ್ಕೆ ಹಚ್ಚಿದರೆ ಬೇಗ ತುರಿಕೆ ಕಡಿಮೆ ಆಗುತ್ತದೆ.
ಪುದಿನಾ ಎಲೆ:
ಪುದಿನಾ ಎಲೆಯನ್ನು ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಅದನ್ನು ಒಂದು ಗ್ಲಾಸ್ ನೀರಿಗೆ ಹಾಕಿಕೊಂಡು ದಿನವೂ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಅಲರ್ಜಿ ತುರಿಕೆ ಕಡಿಮೆ ಆಗುತ್ತದೆ.
ಪಪ್ಪಾಯಿ ಬೀಜ:
ಪಪ್ಪಾಯಿ ಬೀಜವನ್ನು ಪೇಸ್ಟ್ ರೀತಿ ಮಾಡಿಕೊಂಡು ಅದನ್ನು ತುರಿಕೆ ಆಗುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಬೇಗ ಕಡಿಮೆ ಆಗುತ್ತದೆ.
ವಿಟಮಿನ್ ಸಿ:
ವಿಟಮಿನ್ ಸಿ ಇರುವಂಥ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ. ಇಂತಹ ಸಮಸ್ಯೆಗಳು ಇರುವುದಿಲ್ಲ.