ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಮೊಬೈಲ್ ಪದೇ ಪದೇ ಹ್ಯಾಂಗ್ ಆಗುತ್ತಾ? ಹಾಗಿದ್ದರೆ ಈ ಸೆಟ್ಟಿಂಗ್ಸ್ ಗಳನ್ನು ಗಮನಿಸಿ

ಹೊಸ ಯುಗದ ನೂತನ ಆವಿಷ್ಕಾರಗಳ ನಡುವೆಯೂ ನಿಮ್ಮ ಮೊಬೈಲ್ ಗಳು ಬಹುಬೇಗ ಹ್ಯಾಂಗ್ ಆಗುತ್ತದೆ. ಮೊಬೈಲ್ ಹೆಚ್ಚು ಬಳಸದಿದ್ದರು ಕೆಲವೊಮ್ಮೆ ಮೊಬೈಲ್ ಹ್ಯಾಂಗ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದಕ್ಕೆ ಅನೇಕ ಕಾರಣಗಳಿವೆ. ಏನು ಮಾಡಬೇಕು ಅಂತ ನೋಡಿ…

RAM ಸ್ಟೋರೇಜ್:
ಇದು ನಿಮ್ಮ ಮೊಬೈಲ್ ನಲ್ಲಿರುವ ಅಪ್ಲಿಕೇಷನ್ ಗಳಿಂದ ಪರಿಣಾಮ ಬೀರುತ್ತದೆ. ಮೊಬೈಲ್ ನಲ್ಲಿ RAM ಕಡಿಮೆ ಇದ್ದಾಗ ನೀವು ಅನಗತ್ಯ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಡಿ.

ಬ್ಯಾಕ್ ಗ್ರೌಂಡ್:
ನಿಮ್ಮ ಮೊಬೈಲ್ ನಲ್ಲಿ ನೀವು ಕೆಲವು ಸಮಯದ ಹಿಂದೆ ಬಳಸಿದ ಅಪ್ಲಿಕೇಷನ್ ಗಳು ಇನ್ನೂ ಕಲಸ ಮಾಡುತ್ತಿರುತ್ತದೆ. ಹಾಗಾಗಿ ಟಾಸ್ಕ್ ಮ್ಯಾನೇಜರ್ ನಲ್ಲಿ ಕೆಲಸ ಮಾಡುವ ಅಪ್ಲಿಕೇಷನ್ ಗಳನ್ನು ಕ್ಲೋಸ್ ಮಾಡಿ.

ಇಂಟರ್ನಲ್ ಮೆಮೋರಿ:
ನಾವು ಎಷ್ಟೇ ಜಿಬಿ ಮೆಮೋರಿ ಕಾರ್ಡ್ ಹಾಕಿದರು ನೀವು ಯಾವುದರಲ್ಲಿ ನಿಮ್ಮ ಫೋಟೋ, ವಿಡಿಯೋಗಳನ್ನು ಡೌನ್ ಲೋಡ್ ಮಾಡುತ್ತೀರಾ ಅನ್ನೋದು ಮುಖ್ಯವಾಗುತ್ತೆ. ಇಂಟರ್ನಲ್ ಮೆಮೋರಿಯಲ್ಲಿ ಹೆಚ್ಚು ಸ್ಟೋರ್ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಂಗ್ ಆಗುತ್ತದೆ.

ಅನಗತ್ಯ ಆಪ್:
ನೀವು ಒಂದೇ ಸಮಯದಲ್ಲಿ 2ಕ್ಕಿಂತ ಹೆಚ್ಚು ಅಪ್ಲಿಕೇಷನ್ ಗಳನ್ನು ಬಳಸುವುದರಿಂದ ನಿಮ್ಮ ಮೊಬೈಲ್ ಹ್ಯಾಂಗ್ ಆಗುತ್ತದೆ.

ಕ್ಯಾಚಿ:
ನಿಮ್ಮ ಮೊಬೈಲ್ ನಲ್ಲಿ ಸ್ಟೋರ್ ಆಗುವ ತಾತ್ಕಾಲಿಕ ಡೇಟಾ ಆಗಿರುತ್ತದೆ. ಇದನ್ನು ಡಿಲೀಟ್ ಮಾಡಿದರೆ ನಿಮ್ಮ ಮೊಬೈಲ್ ಫಾಸ್ಟ್ ಆಗಿ ವರ್ಕ್ ಆಗುತ್ತದೆ.

ಅಪ್ಡೇಟ್:
ನೀವು ಯಾವುದೇ ಅಪ್ಲಿಕೇಷನ್ ಡೌನ್ ಲೋಡ್ ಮಾಡಿದ ಬಳಿಕ ನಿಮ್ಮ ಪ್ಲೇಸ್ಟೋರ್ ನಲ್ಲಿ ಆಟೋ ಅಪ್ಡೇಟ್ ಕೊಡಬೇಡಿ. ಇದರಿಂದ ಎಲ್ಲಾ ಆಪ್ ಗಳು ಅಪ್ಡೇಟ್ ಆಗುವ ಮೂಲಕ ನಿಮ್ಮ RAM ಮೇಲೆಯೂ ಪರಿಣಾಮ ಬೀರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss