ಕಛೇರಿಯಲ್ಲಿ ಜುಕರ್‌ ಬರ್ಗ್‌ ಕತ್ತಿ ಬೀಸುತ್ತಾರಾ? ಹೀಗಂದಿದ್ಯಾಕೆ ಮಾಜಿ ಫೇಸ್ಬುಕ್‌ ಉದ್ಯೋಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೆಟಾ ಸಿಇಒ ಮಾರ್ಕ್‌ ಜುಕರ್‌ ಬರ್ಗೆ ಬಗ್ಗೆ ಮಾಜಿ ಫೇಸ್ಬುಕ್‌ ಉದ್ಯೋಗಿವಿಚಿತ್ರ ವಿಷಯವೊಂದನ್ನು ಬಹಿರಂಗ ಪಡಿಸಿದ್ದಾನೆ. ಸೀಶಿಯಲ್‌ ಮೀಡಿಯಾ ಕಂಪೆನಿಯಾದ ಫೇಸ್ಬುಕ್‌ ನಲ್ಲಿ ಕೋಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ನೋಹ್ ಕಗನ್ ಎನ್ನುವ ವ್ಯಕ್ತಿಯೊಬ್ಬ ಮೆಟಾವನ್ನು ಫೇಸ್ಬುಕ್‌ ಎಂದು ಕರೆಯಲಾಗುತ್ತಿದ್ದ ಕಾಲದ ಘಟನೆಯೊಂದನ್ನು ವಿವರಿಸಿದ್ದು ಮಾರ್ಕ್‌ ಜುಕರ್‌ ಬರ್ಗ್‌ ತಮ್ಮ ಕಛೇರಿಯಲ್ಲಿ ಕಟಾನಾ ಕತ್ತಿಯನ್ನು ಬೀಸುವ ಅಭ್ಯಾಸ ಹೊಂದಿದ್ದರು. ವೆಬ್‌ಸೈಟ್‌ನಲ್ಲಿ ಹಾಕಲಾದ ಕೋಡ್‌ಗಳು ಮತ್ತು ವಿಷಯವನ್ನು ಇಷ್ಟಪಡದಿದ್ದಾಗ ಜುಕರ್‌ಬರ್ಗ್ ತಮ್ಮ ಕತ್ತಿಯನ್ನು ಬೀಸುತ್ತಿದ್ದರು ಎಂದು ತನ್ನ 13 ನಿಮಿಷದ ವಿಡಿಯೋವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ.

ತನ್ನ ಟಿಕ್‌ ಟಾಕ್‌ ವಿಡಿಯೋ ಒಂದರಲ್ಲಿ ಕಗನ್‌ “ಜುಕರ್‌ ಬರ್ಗ್‌ ಕೆಲ ಉತ್ತಮ ಪ್ರೇರಕ ಸಾಲುಗಳನ್ನು ಹೇಳುತ್ತಿದ್ದರು, ಅಲ್ಲದೇ ಕೆಲಸವನ್ನು ಬೇಗ ಮುಗಿಸದಿದ್ದರೆ ನಿಮ್ಮ ಮುಖಕ್ಕೆ ಗುದ್ದುತ್ತೇನೆ ಎಂದು ಪ್ರೀತಿಯಿಂದ ಹೇಳುತ್ತಿದ್ದರು, ಕೈಯ್ಯಲ್ಲಿ ಕಟಾನಾ ಕತ್ತಿ ಹಿಡಿದು ಈ ದೊಡ್ಡ ಕತ್ತಿಯಿಂದ ನಿಮ್ಮನ್ನು ಕತ್ತರಿಸುತ್ತೇನೆ ಎನ್ನುತ್ತಿದ್ದರು. ಅವರು ಏಕೆ ಆ ಕತ್ತಿಯನ್ನು ಇಟ್ಟುಕೊಂಡಿದ್ದಾರೆ ಎಂದು ಈಗಲೂ ನನಗೆ ಗೊತ್ತಿಲ್ಲ. ತುಂಬಾ ಶಾಂತ ಸ್ವಭಾವ ಹೊಂದಿದ್ದಾರೆ ಎಂದು ತೋರಿಸಿಕೊಳ್ಳುವ ಜುಕರ್‌ ಬರ್ಗ್‌ ಕೆಲವೊಮ್ಮೆ ಕೆಲಸ ಮಾಡಿಸಲು ಕತ್ತಿ ಬಳಸುತ್ತಿದ್ದರು” ಎಂದು ಬಹಿರಂಗ ಪಡಿಸಿದ್ದಾರೆ.

ಕಗನ್‌ ಜುಕರ್‌ ಬರ್ಗ್‌ ಅವರ ಕುರಿತು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ, . ಅವರು ತಮ್ಮ 2014 ರ ಪುಸ್ತಕ “ಹೌ ಐ ಲಾಸ್ಟ್ 170 ಮಿಲಿಯನ್ ಡಾಲರ್: ಮೈ ಟೈಮ್ ಆಸ್ 30 ಅಟ್ ಫೇಸ್‌ಬುಕ್” ನಲ್ಲಿ ಈ ಘಟನೆ ಬಗ್ಗೆ ವಿವರಿಸಿದ್ದಾರೆ.

ಈಗ ಡೀಲ್ಸ್ ಸೈಟ್ ಆಪ್ಸುಮೊದ ಸಿಇಒ ಆಗಿರುವ ಕಗನ್, ಕಂಪನಿಗೆ ಸೇವೆ ಸಲ್ಲಿಸಿದ ಕೇವಲ 10 ತಿಂಗಳ ನಂತರ ಫೇಸ್‌ಬುಕ್‌ನಿಂದ ವಜಾ ಮಾಡಲಾಗಿದೆ, 60,000 ಡಾಲರ್ ಸಂಬಳ ಮತ್ತು ಕಂಪನಿಯಲ್ಲಿ 0.1 ರಷ್ಟು ಪಾಲನ್ನು‌ ಬಿಡಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. ಕೋಪವೇ ಬರುವುದಿಲ್ಲವೆಂದು ತೋರಿಸಿಕೊಳ್ಳುವ ಜುಕರ್‌ ಬರ್ಗ್‌ ವಾಸ್ತವದಲ್ಲಿ ಕೋಪಿಷ್ಟ, ಒಮ್ಮೆ ಫೇಸ್ಬುಕ್‌ನ ಹೊಸ ವೈಶಿಷ್ಟ್ಯದ ಬಗ್ಗೆ ಸಂತೋಷವಾಗಿಲ್ಲವೆಂದು ಎಂಜಿನಿಯರ್ ಕ್ರೈಸ್ಟ್ ಪುಟ್‌ನಮ್ ಅವರ ಕಂಪ್ಯೂಟರ್‌ಗೆ ಒಂದು ಲೋಟ ನೀರನ್ನು ಎಸೆದು “ಇದು ಅತ್ಯಂತ ಕೆಟ್ಟದಾಗಿದೆ.. ಪುನಃ ಮಾಡು” ಎಂದು ಕಿರುಚಿದ್ದರು ಎಂದು ಕಗನ್‌ ಹೇಳಿದ್ದಾರೆ.

ವಿಪರ್ಯಾಸವೆಂದರೆ, ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಯನ್ನು ಹೊಂದಿರುವ ಜುಕರ್‌ಬರ್ಗ್ ನಿಜ ಜೀವನದಲ್ಲಿ ಸಮಾಜ ವಿರೋಧಿ. “ಅವನು ಸ್ವಭಾವತಃ ಸಮಾಜವಿರೋಧಿ ವ್ಯಕ್ತಿ, ಅಂತಹ ವ್ಯಕ್ತಿ ಹೊಸ ಜನರನ್ನು ಭೇಟಿ ಮಾಡಲು ಸಹಾಯ ಮಾಡುವ ಸೈಟ್ ಅನ್ನು ರಚಿಸಿರುವುದು ವಿಚಿತ್ರವೆನಿಸುತ್ತದೆ” ಎಂದು ಕಗನ್‌ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!