ಜೈಪುರ ವಿಮಾನ ನಿಲ್ದಾಣದಲ್ಲಿ ‘ನಾಯಿ ಅಟ್ಯಾಕ್’: ಮಹಿಳೆಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಬಂದಿದ್ದ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ ನಡೆಸಿದ ಘಟನೆ ನಡೆದಿದೆ. ಟರ್ಮಿನಲ್–2ರಿಂದ ಹೊರಬರುತ್ತಿದ್ದ ವೇಳೆ ಗೇಟ್ ಸಮೀಪ ಇದ್ದ ನಾಯಿ ಹಠಾತ್ ದಾಳಿ ಮಾಡಿದ್ದು, ಮಹಿಳೆಯ ಕಾಲಿಗೆ ಗಂಭೀರ ಗಾಯಗಳಾಗಿವೆ. ಮಧ್ಯಾಹ್ನ ಸುಮಾರು 2.20ರ ವೇಳೆಗೆ ನಡೆದ ಈ ಘಟನೆ ಕ್ಷಣಾರ್ಧದಲ್ಲಿ ಆತಂಕ ಸೃಷ್ಟಿಸಿತು. ದಾಳಿಯಿಂದ ಮಹಿಳೆ ನೋವಿನಿಂದ ಕಿರುಚುತ್ತಿದ್ದಂತೆ ಅಲ್ಲಿದ್ದ ಇತರೆ ಪ್ರಯಾಣಿಕರು ನೆರವಿಗೆ ಧಾವಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಕಾಲಿನಲ್ಲಿ … Continue reading ಜೈಪುರ ವಿಮಾನ ನಿಲ್ದಾಣದಲ್ಲಿ ‘ನಾಯಿ ಅಟ್ಯಾಕ್’: ಮಹಿಳೆಗೆ ಗಂಭೀರ ಗಾಯ