ಹೆಲ್ಮೆಟ್ ಹಾಕದೇ ಇರುವವರು ಈ ಘಟನೆ ನೋಡಿಯಾದರೂ ಬದಲಾಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುವುದು ಅಪಾಯಕಾರಿ ಎಂದು ಪೊಲೀಸರು ಹೇಳಿದರೂ ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೆಲ್ಮೆಟ್ ಇಲ್ಲದೇ ಓಡಾಡಿ ಅಪಘಾತಕ್ಕೀಡಾದವರ ಬಗ್ಗೆ ದಿನವೂ ಕೇಳುತ್ತಲೇ ಇರುತ್ತೇವೆ. ಆದರೆ ಇದೀಗ ನಾಯಿಯೊಂದು ತನ್ನ ಮಾಲೀಕನೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಒಂದು ನಾಯಿ ಮತ್ತು ಇನ್ನೊಬ್ಬ ವ್ಯಕ್ತಿ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದಾರೆ. ಹೆಲ್ಮೆಟ್ ಧರಿಸಿ ಎಂದು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಡಿಯೋ ಇದೆಯಂತೆ. ಮೊಹಮ್ಮದ್ ನಯೀಮ್ ಎಂಬ ಟ್ವಿಟರ್ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ‘ರೂಲ್ ಈಸ್ ರೂಲ್’ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಅದರಲ್ಲೂ ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಬೈಕ್ ಓಡಿಸುವುದರಿಂದ ಯುವಕರು ಅಪಘಾತಕ್ಕೀಡಾಗುತ್ತಿದ್ದಾರೆ. ಪೊಲೀಸರು ದಂಡ ಜಾರಿ ಮಾಡಿ ಜಾಗೃತಿ ಮೂಡಿಸಲು ಯತ್ನಿಸಿದರೂ ವಿಫಲರಾಗಿದ್ದಾರೆ. ‘ಈ ವಿಡಿಯೋ ಜನರಿಗೆ ಪಾಠ’ ಎಂದು ಒಬ್ಬರು.. ‘ಭಾರತ ಪ್ರಕಾಶಿಸುತ್ತಿದೆ’ ಎಂದು ಮತ್ತೊಬ್ಬರು ತಮ್ಮ ಕಾಮೆಂಟ್‌ಗಳನ್ನು ಸೇರಿಸಿದ್ದಾರೆ. ಹೆಲ್ಮೆಟ್ ಬಳಸದೆ ನಿರ್ಲಕ್ಷ್ಯ ಮಾಡುವವರು ಇಂತಹ ವಿಡಿಯೋಗಳನ್ನು ನೋಡಿ ಬದಲಾಗಲಿ ಎಂದು ಹಾರೈಸೋಣ.

https://twitter.com/i/status/1660869273768853504

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!