ನೀರಜ್‌ ಚೋಪ್ರಾಗೆ ದೋಹಾ ಡೈಮಂಡ್‌ ಲೀಗ್‌ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೋಕಿಯೋ ಒಲಿಂಪಿಕ್ಸ್‌ ಚಾಂಪಿಯನ್‌, ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಮತ್ತೊಂದು ಸಾಧನೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಖತರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್ ಟ್ರೋಫಿ ಗೆದ್ದಿದ್ದಾರೆ.

ನೀರ​ಜ್‌ ಕಳೆದ ವರ್ಷ ಜ್ಯುರಿಚ್‌ನಲ್ಲಿ ನಡೆ​ದಿದ್ದ ಡೈಮಂಡ್‌ ಲೀಗ್‌ ಫೈನ​ಲ್‌​ನ​ಲ್ಲಿ ಚಾಂಪಿ​ಯನ್‌ ಆಗಿ​, ಈ ಸಾಧನೆ ಮಾಡಿದ ಮೊದಲ ಭಾರ​ತೀಯ ಎಂಬ ಹೆಗ್ಗ​ಳಿ​ಕೆ ಗಳಿಸಿದ್ದರು.

ಈ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ದೋಹಾ ಡೈಮಂಡ್ ಲೀಗ್ -2023 ಗೆದ್ದು ಹೆಮ್ಮೆಗೆ ಪಾತ್ರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!