Friday, July 1, 2022

Latest Posts

ಸಂಘಟನೆ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡುವುದು ಖಂಡನೀಯ: ಎಂಇಎಸ್ ವಿರುದ್ಧ ಯತ್ನಾಳ ವಾಗ್ದಾಳಿ

ಹೊಸದಿಗಂತ ವರದಿ, ವಿಜಯಪುರ:

ಸಂಘಟನೆ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡುವುದು ಖಂಡನೀಯ ಎಂದು ಎಂಇಎಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ದೇಶಪೂರ್ವಕವಾಗಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಕೆಲಸಕ್ಕೆ ಒಂದು ದೊಡ್ಡ ಗುಂಪು ಇದೆ ಎಂದು ದೂರಿದರು.
ಎಂಇಎಸ್ ವಿರುದ್ಧ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯವರು ಕ್ರಮಕ್ಕೆ ಮುಂದಾಗಬೇಕು ಎಂದರು.
ಯಾವುದೇ ಮೂರ್ತಿಗಳ‌‌‌ ಮೇಲೆ ಅಗೌರವ ತೋರಬಾರದು. ಅಂತಹವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತುತ್ತೇನೆ ಎಂದರು.
ರಾತ್ರಿ ಬಂದು ಮೂರ್ತಿಗೆ ಮಸಿ ಬಳಿದರೆ ಗೃಹ ಸಚಿವರು ಏನ್ ಮಾಡಬೇಕು. ಗೃಹ ಸಚಿವರು ಕ್ರಮ ತೆಗೆದುಕೊಳ್ಳದಿದ್ದರೆ ವಿಫಲವಾಗುತ್ತದೆ. ಅದಕ್ಕಾಗಿ ಸರ್ಕಾರ ಹಾಗೂ ಗೃಹ ಸಚಿವರು ಕ್ರಮಕ್ಕೆ ಮುಂದಾಗಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss