Saturday, January 28, 2023

Latest Posts

40 ಕಂಪನಿಗಳ ಮಾತ್ರೆ ಹಿಂದಿಕ್ಕಿದ ಡೋಲೋ 650: ಬೆಂಗಳೂರು ಮೂಲದ ಮಾತ್ರೆ ದಾಖಲೆ ಮಾರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿ. ಸಂಸ್ಥೆಯ ಡೋಲೋ 650 ಮಾತ್ರೆ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ.

2020ರ ಜನವರಿಯಿಂದ ಈವರೆಗೂ ದಾಖಲೆಯ ಮಾರಾಟ ಕಂಡಿದ್ದು, ಬರೋಬ್ಬರಿ 560 ಕೋಟಿಗೂ ಹೆಚ್ಚಿನ ಆದಾಯ ಕಂಡಿದೆ.

ಪ್ಯಾರಾಸಿಟಮೊಲ್ ವಿಭಾಗದಲ್ಲಿ ಈಗಾಗಲೇ 40 ಕ್ಕೂ ಹೆಚ್ಚು ವಿವಿಧ ಕಂಪನಿಗಳ ಮಾತ್ರೆಗಳು ಲಭ್ಯವಿದೆ. ಅವೆಲ್ಲವನ್ನೂ ಡೋಲೋ 650 ಹಿಂದಿಕ್ಕಿದೆ.

ಡಿಸೆಂಬರ್ 2021ರಲ್ಲಿ 28.9 ಕೋಟಿ ರೂ. ಮೌಲ್ಯದ ಡೋಲೋ ಮಾತ್ರೆ ಮಾರಾಟವಾಗಿದೆ. ಜತೆಗೆ 2020 ಏಪ್ರಿಲ್,ಮೇನಲ್ಲಿ ಕೊರೋನಾ ಗರಿಷ್ಠ ಪ್ರಮಾಣದಲ್ಲಿದ್ದ ಕಾರಣ ಆ ವೇಳೆಯೂ ಹೆಚ್ಚಿನ ಲಾಭ ಕಂಡಿದೆ.

ಕೊರೋನಾ ಆರಂಭಕ್ಕೂ ಮುನ್ನದಿಂದಲೇ ವಿವಿಧ ರೋಗ ಲಕ್ಷಣಗಳಿಗೆ ವೈದ್ಯರು ಡೋಲೋ 650 ಶಿಫಾರಸು ಮಾಡುತ್ತಿದ್ದರು. ಇದೀಗ ಕೊರೋನಾ ಕಾರಣದಿಂದ ಅತಿ ಹೆಚ್ಚು ಮಾತ್ರೆಗಳು ಅವಶ್ಯವಾಗಿವೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!