spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರಹ ಪತ್ತೆ

- Advertisement -Nitte

ಹೊಸದಿಗಂತ ವರದಿ, ಕುಮಟಾ:

ಹೊಲನಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಸುಮಾರು 3 ಮೀ ಗಳಷ್ಟು ಉದ್ದವಿರುವ ಡಾಲ್ಫಿನ್ ಯಾವಕಾರಣದಿಂದ ಮೃತ ಪಟ್ಟಿದೆ ಎನ್ನುವದು ತಿಳಿದು ಬಂದಿಲ್ಲ ಗಂಡು ಡಾಲ್ಪಿನ್ ಆಗಿದ್ದು ಕಳೇಬರದ ಮೇಲೆ ಯಾವುದೇ ಗಾಯದ ಗುರುತು ಕಂಡು ಬರುತ್ತಿಲ್ಲ.ಮೀನುಗಾರರು ಇದನ್ನು ಹಂದಿ ಮೀನು ಎಂದು ಕರೆಯುತ್ತಾರೆ. ಈ ಮೀನನ್ನು ಯಾರು ತಿನ್ನುವದಿಲ್ಲ. ಹಿಡಿಯುವದು ಇಲ್ಲ. ಸಾಮಾನ್ಯ ವಾಗಿ ನೂರ ರಿಂದ 150 ನಾಟಿಕಲ್ ಮೈಲ್ ಒಳಗೆ ಸಮುದ್ರದಲ್ಲಿ ವಾಸಿ ಸುವಂತದ್ದು.ಅತ್ಯಂತ ಮೃದು ಸ್ವಭಾವ ಹೊಂದಿದ್ದು ಸಮುದ್ರ ದಲ್ಲಿ ಇದರ ಹಾರಾಟ ಜಿಗಿಯುತ್ತ ಸಾಗುವ ಡಾಲ್ಫಿನ್ ಪ್ರವಾಸಿಗರನ್ನು ಸಮ್ಮೋಹನ ಗೊಳಿಸುವದು. ಆದರೆ ಇತ್ತೀಚಿನ ದಿನದಲ್ಲಿ ಉತ್ತ ರ ಕನ್ನಡದ ಕರಾವಳಿಯಲ್ಲಿ ಡಾಲ್ಫಿನ್ ಸಾವು ಹೆಚ್ಚುತ್ತಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಕುಂಟದಲ್ಲಿಯೇ 8 ಕ್ಕೂ ಹೆಚ್ಚು ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಮುರ್ಡೇಶ್ವರದಿಂದ ಕಾರವಾರದ ತನಕ ವಾರದಲ್ಲಿ ಒಂದಾದರು ಡಾಲ್ಫಿನ್ ಕಳೇಬರ ಪತ್ತೆಯಾಗುತ್ತಿದೆ. ಡಾಲ್ಫಿನ್ ಸಾವಿಗೆ ಕಾರಣ ಕಂಡು ಹಿಡಿಯ ದಿದ್ದಲ್ಲಿ ಮುಂದಿನ ದಿನದಲ್ಲಿ ಅರಬ್ಬಿ ತೀರದ ಸೌಂದರ್ಯದ ಮೆರಗು ಮರೆಯಾಗಬಹುದು. ತಕ್ಷಣ ಪ್ರಣಿತಜ್ನ್ ವಿಜ್ಞಾನಿಗಳು ಡಾಲ್ಫಿನ್ ಸಾವಿಗೆ ಸೌಂಶೋಧನೆ ಮಾಡಬೇಕಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss