ದೇಶೀಯ ವಿಮಾನೋದ್ದಿಮೆ ಚೇತರಿಕೆ- ಪ್ರಯಾಣಿಕ ಸಂಚಾರ ದಟ್ಟಣೆಯಲ್ಲಿ 15ಶೇ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ಕಾಲಘಟ್ಟದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದ ದೇಶೀಯ ವಿಮಾನೋದ್ದಿಮೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ ದಾಖಲಾದ ಪ್ರಯಾಣಿಕ ದಟ್ಟನೆಯಲ್ಲಿನ ಏರಿಕೆ ಈ ಸೂಚನೆಯನ್ನು ನೀಡುತ್ತಿದೆ. ವರದಿಗಳ ಪ್ರಕಾರ ಡಿಸೆಂಬರ್‌ ತಿಂಗಳಲ್ಲಿ ದೇಶೀಯ ವಿಮಾನ ಪ್ರಯಾಣಿಕರ ದಟ್ಟನೆಯಲ್ಲಿ 15 ಶೇಕಡಾ ಏರಿಕೆಯಾಗಿದೆ. ಕಲೆದ ವರ್ಷ ಇದೇ ತಿಂಗಳಿಗಿಂತ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು ಆದಾಗ್ಯೂ ಇದು ಕೋವಿಡ್‌ ಪೂರ್ವ ಕಾಲಘಟ್ಟಕ್ಕಿಂತ 1 ಶೇಕಡಾದಷ್ಟು ಕಡಿಮೆಯಾಗಿದೆ.

ಇಕ್ರಾ ರೇಟಿಂಗ್‌ ಸಂಸ್ಥೆಯನ್ನು ಉಲ್ಲೇಖಿಸಿದ ಪಿಟಿಐ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ, ದೇಶೀಯ ಪ್ರಯಾಣಿಕರ ದಟ್ಟಣೆಯು ಸುಮಾರು 986 ಲಕ್ಷದಷ್ಟಾಗಬಹುದು ಎಂದು ಅಂದಾಜಿಸಲಾಗಿದೆ, ಇದು ವರ್ಷದಿಂದ ವರ್ಷಕ್ಕೆ ಸುಮಾರು 63 ಪ್ರತಿಶತ ಏರಿಕೆಯಾಗಿದೆ. ಆದರೆ ಕೋವಿಡ್‌ ಪೂರ್ವ ಕಾಲಘಟ್ಟ 2019ರ ಏಪ್ರಿಲ್-ಡಿಸೆಂಬರ್ ಗೆ ಹೋಲಿಸಿದರೆ 9 ಪ್ರತಿಶತದಷ್ಟು ಕಡಿಮೆ ಬೆಳವಣಿಗೆ ಎಂದು ಅಂದಾಜಿಸಲಾಗಿದೆ.

2023ನೇ ಆರ್ಥಿಕ ವರ್ಷದಲ್ಲಿ ಹೆಚ್ಚಿನ ದೇಶೀಯ ಪ್ರಯಾಣಿಕ ದಟ್ಟಣೆಯಿಂದಾಗಿ ದೇಶೀಯ ವಿಮಾನೋದ್ದಿಮೆಯು ವೇಗವಾಗಿ ಚೇತರಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಆದರೆ ವಿಮಾನ ಇಂಧನಗಳ ಬೆಲೆ ಏರಿಕೆ ಹಾಗು ರುಪಾಯಿ ಮೌಲ್ಯ ಕುಸಿತದಂತಹ ಕಾರಣಗಳಿಂದ ವಿಮಾನಯಾನ ಸಂಸ್ಥೆಗಳ ಗಳಿಕೆಯು ಅಲ್ಪ ಪ್ರಮಾಣದಲ್ಲಿ ಕ್ಷೀಣಿಸಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!