ಸೌಮ್ಯ ಸ್ವಭಾವದ ‘ಭೀಮ’ನಿಗೆ ಕಿರಿಕಿರಿ ನೀಡಬೇಡಿ: ಅರಣ್ಯ ಇಲಾಖೆಯಿಂದ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಕಾಡಾನೆ ಭೀಮ, ತನ್ನ ಶಾಂತ ಸ್ವಭಾವದಿಂದ ಜನರ ಗಮನ ಸೆಳೆದಿದ್ದಾನೆ. ಆದರೆ, ಆನೆಯನ್ನು ಹತ್ತಿರದಿಂದ ನೋಡಲು, ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿರುವುದು ಭೀಮನ ನೆಮ್ಮದಿಗೆ ಭಂಗ ತರುತ್ತಿದೆ. ಹಾಸನ ಡಿಎಫ್‌ಓ ಸೌರಭ್‌ಕುಮಾರ್ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಕೆಳಗಿನ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವು 24 ಗಂಟೆಗಳ ಕಾಲ ಭೀಮನ ಚಲನವಲನದ ಮೇಲೆ ಕಣ್ಣಿಟ್ಟಿದೆ. … Continue reading ಸೌಮ್ಯ ಸ್ವಭಾವದ ‘ಭೀಮ’ನಿಗೆ ಕಿರಿಕಿರಿ ನೀಡಬೇಡಿ: ಅರಣ್ಯ ಇಲಾಖೆಯಿಂದ ಖಡಕ್ ವಾರ್ನಿಂಗ್