Thursday, August 11, 2022

Latest Posts

ಒಂದು ವಾರವಲ್ಲ, ಸದನ ಪೂರ್ತಿ ಅಮಾನತು ಮಾಡಿದರೂ ಹೆದರುವುದಿಲ್ಲ: ಶಾಸಕ ಸಂಗಮೇಶ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿಧಾನಸಭೆ ಅಧಿವೇಶನದಲ್ಲಿ “ಒಂದು ದೇಶ, ಒಂದೇ ಚುನಾವಣೆ” ಚರ್ಚೆ ಸಂಬಂಧ ಶರ್ಟ್ ಬಿಚ್ಚಿ ಗಲಾಟೆ ಮಾಡಿದ ಶಾಸಕ ಸಂಗಮೇಶ್ ಅವರನ್ನು ಒಂದು ವಾರ ಸದನದಿಂದ ಅಮಾನತುಗೊಳಿಸಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್, ಇವೆರಲ್ಲ ರಾಮನ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಮೇಲೆ ಹಾಗೂ ನನ್ನ ಪುತ್ರ, ತಮ್ಮನ ಮೇಲೆ ಕೊಲೆ ಯತ್ನ ಕೇಸು ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ನಾನು ಶರ್ಟ್ ಬಿಚ್ಚಿದ್ದೇನೆ ಎಂದು ಹೇಳಿದರು.

ನನ್ನನ್ನು ಒಂದು ವಾರವಲ್ಲ ಸದನದ ಪೂರ್ತಿ ಅಮಾನತು ಮಾಡಲಿ, ದಿನವೂ ನಾನು ಸದನಕ್ಕೆ ಬರುತ್ತೇನೆ, ನ್ಯಾಯ ಕೇಳುತ್ತೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಸ್ಪೀಕರ್ ಪಕ್ಷಪಾತಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್ ಬಿಜೆಪಿ ಏಜೆಂಟ್ ಆಗಿದ್ದಾರಾ? ನನ್ನನ್ನ ಮಾನಸಿಕವಾಗಿ ಕುಗ್ಗಿಸಲು ಈ ಕೆಲಸ ಮಾಡ್ತಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ಇದೆಯಾ? ಇವರು ಏನೇ ಮಾಡಿದರೂ ಕ್ಷೇತ್ರದ ಜನರ ಮನಸ್ಸಲ್ಲಿ ನಾನಿದ್ದೇನೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss