ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಹಾಗೂ ಮಳೆ-ನೆರೆ ವಿಕೋಪದಿಂದ ಬಡವರು ಕಣ್ಣೀರಿಡುತ್ತಿದ್ದಾರೆ. ಇಂಥ ಸ್ಥಿತಿ ಇರುವಾಗ ಜನ್ಮದಿನ ಆಚರಿಸುವ ಆಸಕ್ತಿ ನನಗಿಲ್ಲ. ದಯವಿಟ್ಟು ಯಾರೂ ವಿಜೃಂಭಣೆಯಿಂದ ನನ್ನ ಜನ್ಮದಿನ ಆಚರಿಸಬೇಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಳೆ ನನ್ನ ಜನ್ಮದಿನ. ನೀವು ಪ್ರೀತಿಯಿಂದ ನನ್ನ ಜನ್ಮದಿನ ಆಚರಿಸಲು ಇಷ್ಟಪಡುತ್ತೀರಿ ಎಂದು ನನಗೆ ಗೊತ್ತು. ಆದರೆ ಈ ಬಾರಿ ಕೋವಿಡ್ನಿಂದ ನಾವಿನ್ನೂ ಚೇತರಿಸಿಕೊಂಡಿಲ್ಲ. ನೆರೆ- ಮಳೆ ವಿಕೋಪದಿಂದ ತತ್ತರಿಸಿದ್ದೇವೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಿಜೃಂಭಣೆಯ ಜನ್ಮಾಚರಣೆ ಸೂಕ್ತ ಅಲ್ಲ. ಹಾರ ತುರಾಯಿ, ಕೇಕ್ ಕತ್ತರಿಸಿ ವಿಜೃಂಭಣೆ ತೋರಿಸುವುದು ಬೇಡ. ಹಣ ಖರ್ಚು ಮಾಡಿ ನಾನಿರುವಲ್ಲಿಗೆ ಬರುವುದೂ ಬೇಡ. ಹಣವನ್ನು ನಿಮ್ಮ ಸುತ್ತಮುತ್ತ ಇರುವ ಬಡವರಿಗೆ ನೀಡಿ. ಇದೇ ಉತ್ತಮ ಉಡುಗೊರೆಯಾಗುತ್ತದೆ ಎಂದಿದ್ದಾರೆ.