Friday, August 12, 2022

Latest Posts

ಸಿನಿಮಾ ನೋಡೋಕೆ ಥಿಯೇಟರ್‌ಗೆ ಹೊರಟಿದ್ದೀರಾ? ಈ ತಪ್ಪುಗಳನ್ನು ಚಿತ್ರಮಂದಿರದಲ್ಲಿ ಮಾಡಲೇಬೇಡಿ..

ಕೊರೋನಾ ಸಮಯದಲ್ಲಿ ಥಿಯೇಟರ್‌ಗಳಿಗೆ ತೆರಳಿ ಸಿನಿಮಾ ನೋಡುವಂತೆ ಇರಲಿಲ್ಲ. ಆಗೆಲ್ಲ ಎಷ್ಟು ಬೋರಾಗುತ್ತಿತ್ತು? ಆದರೆ ಇದೀಗ ಎಲ್ಲ ಥಿಯೇಟರ್‌ಗಳಲ್ಲಿಯೂ ಹಾಯಾಗಿ ಸಿನಿಮಾ ನೋಡಬಹುದು. ಆದರೆ ಥಿಯೇಟರ್‌ಗಳಲ್ಲಿ ಹೋಗಿ ಈ ಕೆಲಸಗಳನ್ನು ಮಾತ್ರ ಖಂಡಿತಾ ಮಾಡಬೇಡಿ..

  • ಲೇಟಾಗಿ ಬರಬೇಡಿ: ಸಿನಿಮಾ ಆರಂಭವಾಗುವ ಐದು ನಿಮಿಷ ಮುನ್ನ ಬಂದಿದ್ದರೂ ಪರವಾಗಿಲ್ಲ, ಲೇಟಾಗಿ ಬರಬೇಡಿ. ಸುಮ್ಮನೆ ಲೇಟಾಗಿ ಬಂದರೆ ನೀವು ಸೀಟು ಹುಡುಕಲು ಹಾಕುವ ಲೈಟ್ ಇತರರಿಗೂ ಕಿರಿಕಿರಿ ಮಾಡುತ್ತದೆ.
  • ಮೊಬೈಲ್ ಬೇಡ: ಮೊಬೈಲ್ ಬಳಕೆ ಬೇರೆಯವರಿಗೆ ಕಿರಿಕಿರಿ ಆಗುತ್ತದೆ. ಅದರ ಲೈಟ್ ಬೆಳಕು, ಶಬ್ದ ಇತರರ ಸಿನಿಮಾ ಅನುಭವ ಹಾಳು ಮಾಡುತ್ತದೆ.
  • ಮಕ್ಕಳನ್ನು ಕರೆತರಬೇಡಿ: ಗಲಾಟೆ ಮಾಡುವ ಚಿಕ್ಕ ಮಕ್ಕಳಿದ್ದರೆ ಅವರನ್ನು ಕರೆತರಬೇಡಿ. ನೀವು ಸಿನಿಮಾ ನೋಡಲು ಆಗುವುದಿಲ್ಲ. ಇತತರಿಗೂ ಆಗುವುದಿಲ್ಲ.
  • ಮಾತನಾಡಬೇಡಿ: ಸಿನಿಮಾ ಮಧ್ಯೆ ಮಾತನಾಡಬೇಡಿ. ನೀವು ಎರಡನೇ ಬಾರಿ ಸಿನಿಮಾ ನೋಡುತ್ತಿದ್ದರೆ ಡೈಲಾಗ್ಸ್ ಹೇಳುವುದು, ಸಿನಿಮಾ ಕಥೆ ವಿವರಿಸುವುದು ಮಾಡಬೇಡಿ.
  • ಸೀಟ್ ಒದೆಯಬೇಡಿ: ಮುಂದಿನ ಸೀಟ್‌ಗೆ ಒದೆಯುವುದು, ಕಾಲು ಮೇಲೆ ಇಡಲು ಯತ್ನಿಸುವುದು. ಇದೆಲ್ಲಾ ಬ್ಯಾಡ್ ಮ್ಯಾನರ‍್ಸ್
  • ಕಸ ಎಸೆಯಬೇಡಿ: ಮಾಮೂಲಿ ಥಿಯೇಟರ್‌ಗಳಲ್ಲಿ ಸ್ನಾಕ್ಸ್ ಕೊಂಡೊಯ್ಯಬಹುದು. ಇದರ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಬರಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss