MONEY | ಬರೀ ರೀಲ್ಸ್ ನೋಡ್ಬೇಡಿ, Instagram ಬಳಸಿ ಈ ರೀತಿ ದುಡ್ಡು ಮಾಡಿ..

ಇನ್ಸಾಗ್ರಾಮ್‌ನಲ್ಲಿ ಯಾರ್ ಏನಾದ್ರೂ ಮಾಡ್ಕೊಳ್ಳಿ, ನಾವ್ ಮಾತ್ರ ರೀಲ್ಸ್ ನೋಡ್ತಾ ಟೈಮ್ ಪಾಸ್ ಮಾಡ್ತೀವಿ ಅಂತೀರಾ? ಬೇಡ, ಅದರ ಬದಲು ಈ ರೀತಿ ಮಾಡಿ ಹಣ ಮಾಡಿ.. ಎಂಟರ್‌ಟೇನ್ಮೆಂಟ್ ಜೊತೆಗೆ ಸಂಪಾದನೆಯೂ ಆಗುತ್ತದೆ..

ಯಾವುದಾದರೂ ಬ್ರ್ಯಾಂಡ್‌ಗಳ ಜೊತೆ ಕೊಲಾಬರೇಟ್ ಆಗಿ, ಸ್ಪಾನ್ಸರ್ ಕಂಟೆಂಟ್‌ಗಳಿಂದ ಹಣ ಪಡೆಯಿರಿ.

ಆನ್‌ಲೈನ್‌ನಲ್ಲಿ ಬಳಸಿದ ವಸ್ತುಗಳನ್ನು ಮಾರೋದು ಸುಲಭ, ಉಪಯೋಗ ಇಲ್ಲದ ವಸ್ತು ಮಾರಿ ಹಣ ಗಳಿಸಿ.

ನಿಮ್ಮ ಹೆಸರಿನಲ್ಲಿ ಖಾತೆ ಸೃಷ್ಟಿಸಿ, ಖಾತೆಯಲ್ಲಿ ನಿಮ್ಮದೇ ಶಾಪಿಂಗ್ ಅಂಗಡಿ ಮಾಡಿಕೊಳ್ಳಿ. ಬಟ್ಟೆ ಅಥವಾ ಇನ್ಯಾವುದೇ ವಸ್ತು ಮಾರಾಟ ಮಾಡಿ.

ಮಾರ್ಕೆಟಿಂಗ್ ಮಾಡಿ, ಸಣ್ಣ ಪುಟ್ಟ ಅಂಗಡಿಗಳ ಮಾರ್ಕೆಟಿಂಗ್ ಮಾಡಿ, ಅವರ ಪಾರ್ಟ್‌ನರ್ ಆಗಿ ಹಣ ಗಳಿಕೆ ಮಾಡಬಹುದು.

ನಿಮ್ಮ ಫಾಲೋವರ‍್ಸ್ ಹೆಚ್ಚಿದ್ದಲ್ಲಿ ಇನ್ಸ್ಟಾಗ್ರಾಮ್ ಜೊತೆ ಟೈ ಅಪ್ ಆದರೆ ನೀವು ಕ್ರಿಯೇಟ್ ಮಾಡುವ ಕಂಟೆಂಟ್‌ನ ಲೈಕ್ಸ್, ಶೇರ‍್ಸ್ ಆಧಾರದ ಮೇಲೆ ಹಣ ಪಡೆಯಿರಿ.

ಮನೆ ಬಾಡಿಗೆಗೆ, ಲೀಸ್‌ಗೆ ಹಾಗೂ ಮಾರಾಟ ಮಾಡಲು ಮಧ್ಯವರ್ತಿಯಾಗಿ ಕಮಿಷನ್ ಪಡೆಯಿರಿ.

ಹೋಮ್ ಬೇಕರ್, ಹೋಮ್ ಕುಕ್ಕಿಂಗ್ ಮಾಡಿ ಆರ್ಡರ‍್ಸ್ ಪಡೆಯಿರಿ.

ಇನ್ನಷ್ಟು ದಾರಿಗಳಿವೆ, ಸಾಮಾಜಿಕ ಜಾಲತಾಣಗಳ ಸದುಪಯೋಗ ಪಡೆದು ಹಣ ಸಂಪಾದಿಸಿ, ಬೇರೆಯವರು ಮಾಡಿದ ರೀಲ್ಸ್ ನೋಡುವ ಬದಲು ಈ ರೀತಿ ಮಾಡಬಹುದಲ್ವಾ?

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!