CHILD CARE |ಈ ವಿಷಯದ ಬಗ್ಗೆ ಮಕ್ಕಳನ್ನು ಆಡಿಕೊಳ್ಳಬೇಡಿ!

ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳೋದು ತುಂಬಾನೇ ಮುಖ್ಯ. ಆ ಸಮಯಕ್ಕೆ ನೀವು ಆಡಿದ ಮಾತುಗಳು ಏನೂ ಇಲ್ಲದಿರಬಹುದು, ಆದರೆ ಮಕ್ಕಳಿಗೆ ಅವು ದೊಡ್ಡ ಮಾತುಗಳಾಗಿರುತ್ತವೆ. ಕೆಲವನ್ನು ಅವರು ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಅರ್ಥಮಾಡಿಸುವುದಕ್ಕೂ ಕಷ್ಟವಾಗುತ್ತದೆ. ಯಾವ ವಿಷಯಗಳಲ್ಲಿ ಮಕ್ಕಳನ್ನು ಆಡಿಕೊಳ್ಳಬಾರದು ಗೊತ್ತೇ?

  • ವಿದ್ಯಾಭ್ಯಾಸದ ಬಗ್ಗೆ ಮಕ್ಕಳನ್ನು ಆಡಿಕೊಳ್ಳಬೇಡಿ. ಬೇರೆ ಮಕ್ಕಳಿಗೆ ಹೋಲಿಸಬೇಡಿ. ಇದರಿಂದ ಅವರು ಡೀಮೋಟಿವೇಟ್ ಆಗುತ್ತಾರೆ. ಇನ್ನೂ ಕಡಿಮೆ ಅಂಕ ಬರುತ್ತದೆ.
  • ಸಂಬಂಧಗಳು, ಸ್ನೇಹದ ಬಗ್ಗೆ ತಮಾಷೆ ಮಾಡಬೇಡಿ. ಈಗ ನಿಮ್ಮ ಮಗನಿಗೆ ಗೆಳತಿಯರು ಇದ್ದಾರೆಂದರೆ ಅವರನ್ನು ಗರ್ಲ್‌ಫ್ರೆಂಡ್ಸ್ ಎಂದು ತಮಾಷೆ ಮಾಡುವುದು ಮಕ್ಕಳಿಗೆ ಹುಡುಗಿಯರನ್ನು ಮಾತನಾಡಿಸುವಲ್ಲಿ ಹಿಂಜರಿಕೆ ಹುಟ್ಟಿಸುತ್ತದೆ. ಬೇರೆ ಭಾವನೆಗಳು ಆರಂಭವಾಗುತ್ತವೆ.
  • ನೊಡೋಕೆ ಹೇಗಿದ್ದೀಯಾ? ನಿಮ್ಮಬಣ್ಣ ಕಪ್ಪು, ಮೂಗು ಚೆನ್ನಾಗಿಲ್ಲ, ಕುಳ್ಳ ಹೀಗೆ ಅವರ ಫಿಸಿಕಲ್ ಅಪೀಯರೆನ್ಸ್ ಆಡಿಕೊಳ್ಳಬೇಡಿ. ಅದನ್ನು ಅವರು ಬದಲಾಯಿಸೋಕೆ ಆಗೋದಿಲ್ಲ ಆದರೆ ಮನಸ್ಸಿಗೆ ನೋವಾಗುತ್ತದೆ. ಅವರನ್ನು ಅವರೇ ಹೇಟ್ ಮಾಡುತ್ತಾರೆ.
  • ಹೆದರುಪುಕ್ಕಲ, ನಿಂಗೆ ಎಲ್ಲದಕ್ಕೂ ಭಯ, ಒಬ್ಬನೇ ಟಾಯ್ಲೆಟ್ ರೂಂಗೆ ಹೋಗು ನೋಡೋಣ ಹೀಗೆ ಮಕ್ಕಳು ಹೆದರುವ ವಿಷಯಕ್ಕೆ ಸಪೋರ್ಟ್ ಮಾಡಿ, ಅದನ್ನು ಬಿಟ್ಟು ಆಡಿಕೊಳ್ಳಬೇಡಿ.
  • ಮಗು ಸಾಮಾನ್ಯ ಪರಿಚಯ ಇಲ್ಲದವರ ಮುಂದೆ ನಾಚಿಕೆ ವ್ಯಕ್ತಪಡಿಸುತ್ತದೆ, ಆದರೆ ಅದನ್ನು ತಮಾಷೆ ಮಾಡಬೇಡಿ. ಅದು ಅವರ ಸ್ವಭಾವ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!