Friday, March 5, 2021

Latest Posts

ಎಲ್ಲವನ್ನೂ ರಾಜಕೀಯದ ಹಳದಿ ಕಣ್ಣಿನಿಂದ ನೋಡಬೇಡಿ: ಸಿದ್ದರಾಮಯ್ಯಗೆ ಬಿ.ವೈ. ವಿಜಯೇಂದ್ರ ಟಾಂಗ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಸಾರ್ವಭೌಮತೆ, ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮರ್ಥ್ಯ ಏನೆಂಬುದು ಜನತೆಗೆ ತಿಳಿದಿದೆ ಎಂದು ಬಿಜೆಪಿ ಯುವ ನಾಯಕ ಬಿ. ವೈ. ವಿಜಯೇಂದ್ರ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರೇ. ಪಿಎಫ್’ಐ, ಎಸ್’ಡಿಪಿಐ  ಸಂಘಟನೆಗಳ ಪೋಷಣೆ ಕಾಂಗ್ರೆಸ್ ನ ಹೊಣೆ’ ಎಂಬಂತೆ ಅವುಗಳ ಮೇಲಿದ್ದ ಕ್ರಿಮಿನಲ್ ಕೇಸ್ ಗಳನ್ನು ನಿಮ್ಮ ಅಧಿಕಾರ ಅವಧಿಯಲ್ಲಿ ವಾಪಸ್ಸು ಪಡೆದುಕೊಂಡಿರಿ. ಈ ಪಾಪ ಕಾರ್ಯಕ್ಕೆ ರಾಜ್ಯದ ಜನತೆ ನಿಮಗೆ ತಕ್ಕ ಪಾಠಕಲಿಸಿದ್ದನ್ನು ನೀವು ಮರೆತಂತೆ ಕಾಣುತ್ತದೆ. ಎಲ್ಲವನ್ನೂ ರಾಜಕೀಯದ ಹಳದಿ ಕಣ್ಣಿನಿಂದ ನೋಡಬೇಡಿ ಎಂದು ಹೇಳಿದ್ದಾರೆ.

ದೇಶದ್ರೋಹಿ,ಮತಾಂಧ ಉಗ್ರಗಾಮಿಗಳ ಹುಟ್ಟಡಗಿಸಿ, ಆರ್ಟಿಕಲ್ 370 ಜಾರಿಗೆ ತಂದು, ಕಾಶ್ಮೀರ ರಕ್ಷಿಸಿ, ಭಾರತದ ಸಾರ್ವಭೌಮತೆಯನ್ನು ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮರ್ಥ್ಯ ಏನೆಂಬುದು ಜನತೆಗೆ ತಿಳಿದಿದೆ. ನಿಮ್ಮ ಕಾಂಗ್ರೆಸ್ ನ ಅಂಗಸಂಸ್ಥೆಗಳೇ ಆಗಿರುವ ಪಿಎಫ್’ಐ, ಎಸ್’ಡಿಪಿಐ ಗಳಿಗೆ ಮುಕ್ತಿ ಹಾಡುವ ಕಾಲ ಶೀಘ್ರದಲ್ಲೇ ಬರಲಿದೆ, ನೋಡುತ್ತಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss