spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿರಿಯಡ್ಸ್ ಸಮಯದಲ್ಲಿ ನೀವು ಮಾಡುವ ಈ ಸಣ್ಣ ತಪ್ಪುಗಳೇ ದೊಡ್ಡ ಸಮಸ್ಯೆಗೆ ಕಾರಣ.. ಯಾವೆಲ್ಲ ತಪ್ಪು ನೋಡಿ…

- Advertisement -Nitte

ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಎಷ್ಟು ಕಾಳಜಿ ವಹಿಸಿದರೂ ಕಡೆಮೆಯೆ. ಈ ಸಮಯದಲ್ಲಿ ಮಹಿಳೆಯರು ಮಾನಸಿಕ ಹಾಗೂ ಶಾರೀರಿಕ ಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ತುಂಬಾ ಜನರಿಗೆ ಪಿರಿಯಡ್ಸ್ ಸಮಯದಲ್ಲಿ ಯಾವ ಕೆಲಸವನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎಂಬುದು ಗೊತ್ತಿರುವುದಿಲ್ಲ. ಪಿರಿಯಡ್ಸ್ ಸಮಯದಲ್ಲಿ ಮಾಡುವ ಚಿಕ್ಕ, ಪುಟ್ಟ ತಪ್ಪುಗಳು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ…

ವ್ಯಾಯಾಮ:
ಪಿರಿಯಡ್ಸ್ ಸಮಯದಲ್ಲಿ ಎಲ್ಲ ರೀತಿಯ ವ್ಯಾಯಾಮ ಮಾಡಬಾರದು. ವೈದ್ಯರ ಸಲಹೆಯ ಮೇರೆಗೆ ಪಿರಿಯಡ್ಸ್ ಸಮಯದಲ್ಲಿ ಮಾಡಬಹುದಾದಂತಹ ವ್ಯಾಯಾಮ ಮಾತ್ರ ಮಾಡಿರಿ.

woman working out

ಹಸಿವು:
ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ಖಾಲಿ ಬಿಡಬೇಡಿ. ಹಸಿವು ಎನಿಸಿದ ತಕ್ಷಣ ತಿನ್ನಿರಿ. ಹೊಟ್ಟೆ ಖಾಲಿ ಇದ್ದಷ್ಟು ಬ್ಲೀಡಿಂಗ್ ಜಾಸ್ತಿ ಆಗುತ್ತದೆ. ಹೊಟ್ಟೆ ನೋವು ಬರುತ್ತದೆ.

ನೀರು:
ಪಿರಿಯಡ್ಸ್ ವೇಳೆ ದ್ರವ ಆಹಾರಗಳನ್ನು ಸೇವಿಸುವುದಕ್ಕೆ ಇಷ್ಟವಾಗುವುದಿಲ್ಲ. ಅದರಲ್ಲೂ ನೀರು ಕುಡಿಯುವುದೇ ಬೇಡ ಎನಿಸುತ್ತದೆ. ಆದರೆ ಅಪ್ಪಿ-ತಪ್ಪಿಯೂ ಈ ತಪ್ಪು ಮಾಡಬೇಡಿ. ಉಗುರು ಬಿಸಿ ನೀರನ್ನು ಹೆಚ್ಚು ಸೇವಿಸುತ್ತಿರಿ.

glass of water

ಟ್ರಾವೆಲ್ ಬೇಡ:
ಅನಿವಾರ್ಯವೆನಿಸಿದರೆ ಮಾತ್ರ ಪಿರಿಯಡ್ಸ್ ವೇಳೆ ಟ್ರಾವೆಲ್ ಮಾಡಿ. ಇಲ್ಲವಾದರೆ ಮನೆಯಲ್ಲಿಯೇ ರೆಸ್ಟ್ ಮಾಡಿ. ಪಿರಿಯಡ್ಸ್ ಸಮಯದಲ್ಲಿ ರೆಸ್ಟ್ ಮಾಡಿದಷ್ಟು ಉತ್ತಮ ಆರೋಗ್ಯ ಪಡೆಯುತ್ತೀರಿ.

ಸ್ವಿಮ್ಮಿಂಗ್:
ಪಿರಿಯಡ್ಸ್ ಸಮಯದಲ್ಲಿ ಸ್ವಿಮಿಂಗ್ ಮಾಡಬೇಡಿ. ಬಿಪಿ ಸಮಸ್ಯೆ ಇರುವವರು ಈ ಸಮಯದಲ್ಲಿ ಸ್ವಿಮಿಂಗ್ ಮಾಡಿದರೆ ಬಿಪಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರೋಗ್ಯವಂತರು ಅಗತ್ಯ ಮುಂಜಾಗರೂ ಕ್ರಮದೊಂದಿಗೆ ಪಿರಿಯಡ್ಸ್ ಆದ ಮೂರನೇ ದಿನ ಸ್ವಿಮ್ಮಿಂಗ್ ಮಾಡಬಹುದು.

ಪ್ಯಾಡ್:
ಕೆಲಸದ ವೇಳೆ ಸಮಯವಿಲ್ಲವೆಂದು ಅಥವಾ ಬ್ಲೀಡಿಂಗ್ ಕಡಿಮೆ ಆಗಿದೆ ಎಂಬ ಕಾರಣಕ್ಕೆ ಪ್ಯಾಡ್ ಬದಲಿಸದೇ ಬಿಡಬೇಡಿ. 5 ಗಂಟೆಗೊಮ್ಮೆ ತಪ್ಪದೇ ಪ್ಯಾಡ್ ಬದಲಿಸಿ.

ಸ್ನಾನ:
ಬಹಳಷ್ಟು ಜನ ಈ ತಪ್ಪನ್ನು ಮಾಡುತ್ತಾರೆ. ಪಿರಿಯಡ್ಸ್ ಸಮಯದಲ್ಲಿ ಸ್ನಾನ ಮಾಡುವುದಿಲ್ಲ. ಆದರೆ ಈ ವೇಳೆ ಕ್ಲೀನ್ ಇದ್ದಷ್ಟೂ ಕಡಿಮೆಯೇ. ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿಕೊಂಡು ದಿನವೂ ಸ್ನಾನ ಮಾಡಿ.

ಕಾಫಿ, ಟೀ ಸೇವನೆ:
ಟೀ, ಕಾಫಿಯನ್ನು ಪಿರಿಯಡ್ಸ್ ಸಮಯದಲ್ಲಿ ಆದಷ್ಟು ಕಡಿಮೆ ಕುಡಿಯಿರಿ. ಇದರಿಂದ ಹೊಟ್ಟೆಯುಬ್ಬರರದಂಥ ಸಮಸ್ಯೆಯಾಗಬಹುದು. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ, ಇದು ಮುಟ್ಟಿನ ಸೆಳೆತವನ್ನು ಉಲ್ಬಣಗೊಳಿಸಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss