Sunday, June 26, 2022

Latest Posts

ಇನ್ಮುಂದೆ ಇರಾನ್ ಟಿವಿಯಲ್ಲಿ ಮಹಿಳೆಯರು ಪಿಜ್ಜಾ ತಿನ್ನುವುದು, ಪುರುಷರು ಟೀ ಕೊಡುವ ದೃಶ್ಯ ಹಾಕುವಂತಿಲ್ಲ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇರಾನ್ ರಾಷ್ಟ್ರದಲ್ಲಿ ಹೊಸ ಸೆನ್ಸಾರ್ ನಿಯಮ ಜಾರಿಯಾಗಿದ್ದು, ಇದರಲ್ಲಿ ಒಂದೆರಡು ವಿಚಿತ್ರ ನಿರ್ಬಂಧ ಹೇರಿದೆ.
ಇನ್ಮುಂದೆ ಟಿವಿಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಲ್ಲಿ ಮಹಿಳೆಯರು ಪಿಜ್ಜಾ ತಿನ್ನುವುದು ಹಾಗೂ ಪುರುಷರು ಮಹಿಳೆಯರಿಗೆ ಕಾಫಿ, ಟೀ ಕೊಡುವ ದೃಶ್ಯಗಳನ್ನು ಪ್ರಸಾರ ಮಾಡಲು ನಿರ್ಬಂಧಿಸಲಾಗಿದೆ.
ಸಾಮಾನ್ಯವಾಗಿ ಟಿವಿಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ವಿಭಿನ್ನ ಕಾನ್ಸೆಪ್ಟ್ ಮೂಲಕ ಆಯಾ ಕಂಪನಿಗಳು ಕ್ರಿಯಾಶೀಲ ಜಾಹೀರಾತುಗಳನ್ನು ಮಾಡುತ್ತವೆ. ಆದರೆ ಇರಾನ್ ನ ಈ ಹೊಸ ನಿಯಮದ ಅನುಸಾರ ಮಹಿಳೆಯರು ಪಿಜ್ಜಾ ಸೇವಿಸುವುದು, ಕೋಲ್ಡ್ ಡ್ರಿಂಗ್ಸ್ ಕುಡಿಯುವುದು ಹಾಗೂ ಮಹಿಳೆಯರು ಚರ್ಮದ ಕೈಗವಸು ಧರಿಸಿರುವ ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದಿದೆ.
ಇನ್ನು ಪುರುಷರ ಜಾಹೀರಾತಿಗೂ ನಿರ್ಬಂಧ ಹೇರಲಾಗಿದ್ದು, ಪುರುಷರು ಮಹಿಳೆಯರಿಗೆ ಟೀ, ಕಾಫಿ ಸರ್ವ್ ಮಾಡುವ ದೃಶ್ಯ ತೋರಿಸುವಂತಿಲ್ಲ ಎಂದು ಇರಾನ್ ಸೆನ್ಸಾರ್ ಮಂಡಳಿ ತಿಳಿಸಿದೆ.
ಈ ನಿಯಮಗಳನ್ನು ಪಾಲಿಸದಿದ್ದರೆ ಟಿವಿ ಚಾನೆಲ್ ಗಳಿಗೆ ಭಾರೀ ದಂಡ ಕಟ್ಟಬೇಕಾಗುವುದು ಎಂದು ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss