ಐಟಂ ಸಾಂಗ್ ಮಾಡಬೇಡ ಅಂದಿದ್ರು: ವಿಚ್ಛೇದನದ ದಿನಗಳ ಕುರಿತು ಸಮಂತಾ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ರುತ್ ಪ್ರಭು 2021ರ ಅಕ್ಟೋಬರ್ ತಿಂಗಳಲ್ಲಿ ನಾಗ ಚೈತನ್ಯ (Naga Chaitanya) ಅವರಿಂದ ವಿಚ್ಛೇದನ ಪಡೆದಿದ್ದಾರೆ .ಅನೇಕರು ಈ ನಿರ್ಧಾರದಿಂದ ಶಾಕ್​​ಗೆ ಒಳಗಾದರು.

ಇದೇ ಸಂದರ್ಭದಲ್ಲಿ ಸಮಂತಾಗೆ ‘ಪುಷ್ಪ’ ಸಿನಿಮಾದ ಐಟಂ ಸಾಂಗ್​ನಲ್ಲಿ ನಟಿಸೋ ಅವಕಾಶ ಬಂತು. ಇದನ್ನು ಸಮಂತಾ ಒಪ್ಪಿಕೊಂಡು ನಟಿಸಿದ್ದರು. ಇದೀಗ ಈ ಕ್ಷಣದ ಕುರಿತು ಅವರು ಮಾತನಾಡಿದ್ದಾರೆ.

‘ಪುಷ್ಪ ಚಿತ್ರದ ಐಟಂ ಸಾಂಗ್ ಆಫರ್ ನೀಡಿದಾಗ ನಾನು ವಿಚ್ಛೇದನ ಪ್ರಕ್ರಿಯೆಯಲ್ಲಿದ್ದೆ. ಈ ಹಾಡನ್ನು ಮಾಡದಂತೆ ಕುಟುಂಬದವರು, ಗೆಳೆಯರು ಸೂಚಿಸಿದ್ದರು. ಐಟಂ ಸಾಂಗ್​ನೆಲ್ಲ ಮಾಡಬೇಡ ಎಂದು ಕಿವಿಮಾತು ಹೇಳಿದ್ದರು. ಅವರು ಹೇಳಿದ್ದರ ಹಿಂದೆ ಒಳ್ಳೆಯ ಉದ್ದೇಶ ಇತ್ತು. ಆದರೆ, ಅದನ್ನು ನಾನು ಮಾಡೋ ನಿರ್ಧಾರಕ್ಕೆ ಬಂದೆ’ ಎಂದಿದ್ದಾರೆ.

‘ನಾನೇಕೆ ಅವಿತುಕೊಳ್ಳಲಿ? ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾವುದೇ ಕ್ರೈಮ್ ಮಾಡಿರಲಿಲ್ಲ. ಹೀಗಾಗಿ, ಅವಿತುಕೂರೋ ಮಾತೇ ಇರಲಿಲ್ಲ. ನಾನು ನನ್ನ ದಾಂಪತ್ಯ ಜೀವನಕ್ಕೆ ಶೇ. 100 ನೀಡಿದ್ದೆ. ಆದಾಗ್ಯೂ ಸಂಬಂಧ ಉಳಿದುಕೊಂಡಿಲ್ಲ. ನಾನು ಮಾಡದೇ ಇರುವ ಕೆಲಸಕ್ಕೆ ನಾನು ಪಶ್ಚಾತಾಪ ಪಡೋದಿಲ್ಲ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!