ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ, ಡಿಸಿಎಂ ವಿಚಾರವಾಗಿ ಬಹಿರಂಗ ಚರ್ಚೆ ಬೇಡ. ಪಕ್ಷವನ್ನು ಎಷ್ಟು ಕಷ್ಟಪಟ್ಟು ಅಧಿಕಾರಕ್ಕೆ ತಂದಿದ್ದೇವೆ. ನಿಮ್ಮ ಬಾಯಿಗೆ ಬೀಗ ಹಾಕಿ, ಇಲ್ಲದಿದ್ರೆ ಪಕ್ಷದಿಂದ ನೋಟಿಸ್ ಜಾರಿ ಮಾಡಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಶಾಸಕರು, ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನನಗೆ ಯಾರ ರೆಕಮಂಡೇಶನ್ ಬೇಡ. ಆಶೀರ್ವಾದ ಸಾಕು. ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ ಎಂದು ಸ್ವಾಮೀಜಿಗಳಿಗೆ ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ. ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುವೆ. ಚಂದ್ರಶೇಖರ್ ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಮಾತನಾಡಿದ್ದಾರೆ. ನಿನ್ನೆ ನಾವೆಲ್ಲ, ಎಂಪಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಕೂಡ ಬಂದಿದ್ದರು, ಮುಕ್ತವಾಗಿ ಮಾತಾಡಿದ್ದೇವೆ ಎಂದರು.