VIRAL VIDEO | ಈ ಥರ ಹುಚ್ಚಾಟ ಮಾಡಬೇಡಿ, ಇದೆಲ್ಲಾ ಸಿನಿಮಾದಲ್ಲಿ ನೋಡೋಕಷ್ಟೇ ಚಂದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಲ್ಲಿ ಏನೆಲ್ಲಾ ವಿಚಿತ್ರ ಟ್ರೆಂಡ್‌ಗಳು ಬಂದಿವೆ. ಈಗೆಲ್ಲಾ ಮದುವೆ ಸಂಪ್ರದಾಯಕ್ಕಿಂತ ಹೆಚ್ಚು ತೋರಿಕೆಯಾಗಿದೆ. ಎಲ್ಲರಿಗಿಂತ ತಮ್ಮ ಮದುವೆ ವಿಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಈ ಭರದಲ್ಲಿ ಅದ್ವಾನಗಳು ಆಗುತ್ತವೆ.

ಇಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಕ್ರೇನ್ ಸಹಾಯದಿಂದ ತಂದೆ ಮಗಳು ಮದುವೆಮನೆಗೆ ಎಂಟ್ರಿ ಕೊಡುತ್ತಾರೆ. ಸ್ವರ್ಗಲೋಕದಿಂದ ಧರೆಗೆ ಬಂದಂತೆ ಕಾಣುವಷ್ಟು ಅಂದದ ದೃಶ್ಯ ಇದಾಗಿದೆ.

ಇದನ್ನು ನೋಡಿದ ನೆಟ್ಟಿಗರು ಮದುವೆ ಆದರೆ ಹೀಗೆ ಆಗಬೇಕು ಎಂದಿದ್ದಾರೆ. ಆದರೆ ಹೆಚ್ಚು ಮಂದಿ ಈ ಹುಚ್ಚಾಟ ಇಲ್ಲಿಗೇ ಕೊನೆಯಾಗಬೇಕು. ದುಡ್ಡಿಲ್ಲದವರು ಈ ರೀತಿ ಮದುವೆಯಾಗಬೇಕು ಎಂದು ಬಯಸುತ್ತಾರೆ.

ಆದರೆ ದುಡ್ಡಿರೋದಿಲ್ಲ, ಇನ್ನು ಇವರು ಹೀಗೆ ಮಾಡಿದ್ದಾರೆ ಇದಕ್ಕೂ ಮೇಲೆ ಏನಾದರೂ ಮಾಡಬೇಕು ಅನ್ನೋ ಸ್ಟಾಂಡರ್ಡ್ ಸೆಟ್ ಆಗುತ್ತದೆ. ಕ್ರೇನ್ ಸುರಕ್ಷತೆ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಕ್ರೇನ್ ಮಧ್ಯಕ್ಕೆ ಕೈಕೊಟ್ಟು ಕೆಳಗೆ ಬಿದ್ದರೆ ಕಥೆ ಏನು? ಈ ಸಂಸ್ಕೃತಿಗೆ ಬ್ರೇಕ್ ಹಾಕಬೇಕು ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!