ಚೀನಾ ಫೋನ್‌ಗಳನ್ನು ಬಳಸಬೇಡಿ, ರಕ್ಷಣಾ ಗುಪ್ತಚರ ಇಲಾಖೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್‌ಎಸಿಯಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷದ ನಡುವೆ, ನಮ್ಮ ಸೇನಾ ಸಿಬ್ಬಂದಿಗಳು ಚೀನಾ ಮೊಬೈಲ್‌ಗಳನ್ನು ಬಳಕೆ ಮಾಡುತ್ತಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ರಕ್ಷಣಾ ಗುಪ್ತಚರ ಏಜೆನ್ಸಿಗಳು ಸಲಹೆ ನೀಡಿವೆ.

ಫಾರ್ಮೇಷನ್ಸ್ ಹಾಗೂ ಯುನಿಟ್‌ಗಳು ತಮ್ಮ ಸಿಬ್ಬಂದಿಗಳಿಗೆ ಚೀನಾ ದೇಶದಲ್ಲಿ ತಯಾರಾದ ಮೊಬೈಲ್ ಫೋನ್‌ಗಳನ್ನು ಬಳಸದಂತೆ ಎಚ್ಚರ ವಹಿಸಲಾಗಿದೆ. ಈ ಬಗ್ಗೆ ರಕ್ಷಣಾ ಗುಪ್ತಚರ ಏಜೆನ್ಸಿಗಳು ಗಂಭೀರ ಎಚ್ಚರಿಕೆ ನೀಡಿವೆ.

ಚೀನಾ ಫೋನ್‌ಗಳಲ್ಲಿ ಮಾಲ್ವೇರ್ ಹಾಗೂ ಸ್ಪೈವೇರ್ ಇರುವ ಸಾಧ್ಯತೆ ಹೆಚ್ಚಿದ್ದು, ಈ ಫೋನ್‌ಗಳ ಬಳಕೆ ಬೇಡ ಎಂದಿದ್ದಾರೆ. ಎಎನ್‌ಐಗೆ ಸಲಹೆಯ ಪ್ರತಿ ನೀಡಲಾಗಿದ್ದು, ಭಾರತದ ಭದ್ರತೆಗೆ ಸಂಬಂಧಿಸಿದ, ಸೇನಾ ಗೂಢಚಾರಿಕೆ ಏಜೆನ್ಸಿಗಳು, ಸಿಬ್ಬಂದಿಗಳು ಭಾರತದ ಶತ್ರು ದೇಶಗಳ ಫೋನ್ ಖರೀದಿ, ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!