ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾವುದೋ ಇಮೋಜಿ ಬಳಸಲು ಹೋಗಿ ಇನ್ಯಾವುದನ್ನೋ ಬಳಸಿ ಪೇಜಿಗೆ ಸಿಕ್ಕಿಹಾಕಿಕೊಂಡಿದ್ರಾ? ಯಾವ ಇಮೋಜಿ ಯಾವಾಗ ಬಳಸಬೇಕು?

 • ಮೇಘನಾ ಶೆಟ್ಟಿ, ಶಿವಮೊಗ್ಗ

ಸಾಮಾಜಿಕ ಜಾಲತಾಣಗಳಲ್ಲಿ ಇಮೋಜಿಗಳ ಲೋಕವೇ ಸೃಷ್ಟಿಯಾಗಿದೆ. ಮೆಸೇಜಸ್‌ಗಿಂತ ಹೆಚ್ಚು ಇಮೋಜಿಗಳ ಮೂಲಕ ಸಂವಹನ ನಡೆಯುತ್ತದೆ.
ಇಮೋಜಿಗಳ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳದಿದ್ರೆ ಎಡವಟ್ಟಾಗೋದು ಖಂಡಿತ
ನನ್ನ ಸ್ನೇಹಿತನೊಬ್ಬ ತನ್ನ ಆಫೀಸಿನ ಗ್ರೂಪ್‌ನಲ್ಲಿ ಆದ ಸಂಗತಿಯೊಂದನ್ನು ಸ್ವಾರಸ್ಯಕರವಾಗಿ ವಿವರಿಸಿದ..
‘ಕೊರೋನಾ ಸೋಂಕು ತಗುಲಿ ನಮ್ಮ ಮಾನ್ಯ ಎಚ್‌ಆರ್ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ, ನಮ್ಮ ಪ್ರೀತಿಯ ಎಚ್‌ಆರ್ ಅವರ ಅಗಲಿಕೆಯನ್ನು ಸಹಿಸಲು ಆಗುತ್ತಿಲ್ಲ ಎಂದು ಮೆಸೇಜ್ ಬಂದಿತ್ತು. ಈ ಗ್ರೂಪ್‌ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ‍್ಸ್ ಕೂಡ ಇದ್ದರು. ಎಲ್ಲರೂ ಓಂಶಾಂತಿ, ಆರ್‌ಐಪಿ ಎಂದೆಲ್ಲಾ ಹಾಕುತ್ತಿದ್ದರು. 🙏🏻 ಕೈ ಮುಗಿಯುವ ಇಮೋಜಿಯೂ ಇತ್ತು. ನಾನು ಒಂದು ಇಮೋಜಿ ಹಾಕಿಬಿಡೋಣ ಎಂದು ಕಣ್ಣಲ್ಲಿ ನೀರು ಬರುವ 😂 ಇಮೋಜಿಯನ್ನು ಹಾಕಿದೆ. ಇದಾದ ನಿಮಿಷಕ್ಕೆ ನಮ್ಮ ಆಫೀಸಿನ ಸಿಬ್ಬಂದಿ ಕರೆ ಮಾಡಿ, ಎಚ್‌ಆರ್ ರಜ ಕೊಡದಿರಬಹುದು ಆದರೆ ಸಾವಿನ ಸಮಯದಲ್ಲಿ ಹೀಗೆ ಮಾಡೋದು ತಪ್ಪು’ ಎಂದರು.

‘ನಾನು ಮಾಡಿದ ತಪ್ಪಾದರೂ ಏನು? ನಂತರ ಗೊತ್ತಾಯ್ತು ನಾನು ಹಾಕಿದ್ದು, ಅಳುವ ಇಮೋಜಿ ಅಲ್ಲ, ಹೊಟ್ಟೆ ತುಂಬಾ ನಕ್ಕು ಸುಸ್ತಾಗಿ ಕಣ್ಣಲ್ಲಿ ನೀರು ಬರುವ 😢 😂 ಇಮೋಜಿ!’

ನೀವು ಇಂಥ ಪೇಚಿಗೆ ಸಿಲುಕಬಾರದಾದರೆ ಇಮೋಜಿಗಳ ಅರ್ಥ ತಿಳಿದುಕೊಳ್ಳಿ…


ಪ್ರೊಫೆಶನಲ್ ಇಮೋಜಿ

 • 😊 ಇದರ ಹಿಂದೆ ಯಾವುದೇ ಹಿಡನ್ ಅಜೆಂಡಾ ಇಲ್ಲ, ನೇರವಾದ ನಗು, ಹೆಚ್ಚಾಗಿ ಪ್ರೊಫೆಶನಲ್ ಆಗಿ ಆಫೀಸಿನಲ್ಲಿ ನಾವು ತೋರುವ ಮುಖದ ರೆಪ್ಲಿಕಾ ಇದು.
 • 😱😳 ಆಶ್ಚರ್ಯಚಕಿತರಾಗಿದ್ದೇವೆ ಎಂದು ತಿಳಿಸಲು ಈ ಎರಡು ಇಮೋಜಿಗಳನ್ನು ಬಳಸಬಹುದು.
 • 🤣😄 ಇವುಗಳನ್ನು ಫನ್ನಿಯಾದ ಜೋಕ್ ಫಾರ್ವರ್ಡ್ ಆದಾಗ ಬಳಸಿ
 • 😎🤓 ಇಂಟಲಿಜೆಂಟ್ ಆಗಿ ವರ್ತಿಸಿ, ಅಥವಾ ಈ ಸಿಟ್ಯುಯೇಶನ್ ಸಾಲ್ವ್ ಆಗಿದೆ ಎಂದು ತಿಳಿಸಲು ಇದನ್ನು ಬಳಸಬಹುದು.


  ಸ್ನೇಹಿತರಿಗೆ ಬಳಸುವ ಫೇಮಸ್ ಇಮೊಜಿ

 • 🤪😜😝😋😛 ಹೊಟ್ಟೆ ಉರಿ ಎಂದು ಸೂಚಿಸುವಂತೆ, ನಿನಗೆ ಇಲ್ಲ ಎಂದು ಹೇಳಲು ಇದನ್ನು ಬಳಸಬಹುದು.
 • 🤣😄 ಸಿಕ್ಕಾಪಟ್ಟೆ ಹೊಟ್ಟೆ ಹುಣ್ಣಾಗುವಂತಹ ನಗು ಇದ್ದಾಗ ಇದನ್ನು ಬಳಸಿ
 • 🙁😟😔😞😒☹️😣 ಬೇಜಾರಾದಾಗ ಇದನ್ನು ಬಳಸಬಹುದು.
 • 😑😐😶 ಹೇಳಲು ಏನು ಇಲ್ಲದಾಗ, ನಾನು ಬ್ಲಾಂಕ್ ಎಂದು ಹೇಳಲು ಇದನ್ನು ಬಳಸಿ.
 • 👿😈 ನನ್ನ ಕೆಟ್ಟ ಸೈಡ್, ಇವಿಲ್ ಸೈಡ್ ಇದು ಎಂದು ಹೇಳಲು ತಮಾಷೆಯಾಗಿ ಇದನ್ನು ಬಳಸಬಹುದು.
 • 😖🥴 ಇರಿಟೇಟ್ ಆಗಿ, ಗೊಂದಲ ಆದಾಗ ಇದನ್ನು ಬಳಸಬಹುದು.
 • 🤨😏 ಇಗ್ನೋರ್ ಮಾಡಲು ಇಷ್ಟ ಪಡುವ, ಕ್ಯಾರೆ ಎನ್ನುವುದಿಲ್ಲ ಎನ್ನುವುದನ್ನು ಸೂಚಿಸಲು ಇದನ್ನು ಬಳಸಿ.


  ಪ್ರೀತಿಪಾತ್ರರ ಫೇಮಸ್ ಇಮೋಜಿ

 • 😍🥰 ಕಣ್ಣಿನಲ್ಲೇ ಹೃದಯ ತುಂಬಿ ಬಂದಿದೆ ಎಂದು ಹೇಳಲು.
 • 😘 ಫ್ಲೈಯಿಂಗ್ ಕಿಸ್ ನೀಡಲು
 • 😉 ಕಣ್ಣು ಹೊಡೆಯಲು, ಫ್ಲರ್ಟಿಯಾಗಿ ಮಾತನಾಡುವಾಗ ಇದನ್ನು ಬಳಸಿ
 • ❤️ ಪ್ರೀತಿಯಿಂದ ಬಂದ ಯಾವ ಮಾತುಗಳಿಗಾದರೂ ಹಾರ್ಟ್ ಬಳಸಬಹುದು.
 • 😡😠 ಸಿಟ್ಟು ಬಂದಿದೆ, ಮಾತನಾಡುವುದು ಬೇಡ ಎಂದು ತಮಾಷೆಯಾಗಿ ಹೇಳಲು ಇದನ್ನು ಬಳಸಿ.
 • 🙀😨😱 ಆಶ್ಚರ್ಯವಾಯ್ತು ಎನ್ನಲು ಇದನ್ನು ಬಳಸಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss