ಮದುವೆ ರಿಸೆಪ್ಷನ್, ಅಕ್ಕನದೋ ಅಣ್ಣನದೋ ಮದುವೆಗೆ ಹಾಕಿದ ಲೆಹೆಂಗಾದಲ್ಲಿ ಒಂದು ರಾಶಿ ಫೋಟೊ ಇದೆ, ಸದ್ಯಕ್ಕೆ ಮತ್ತೆ ಅದನ್ನು ಹಾಕೋದಿಲ್ಲ ಅಂತ ಎತ್ತಿಟ್ಟಿದ್ದೀರಾ? ಮತ್ಯಾವ್ದೋ ಫಂಕ್ಷನ್ ಬಂತೆಂದು ಹೊಸ ಬಟ್ಟೆ ಖರೀದಿ ಮಾಡ್ತಿದ್ದೀರಾ? ಈಗಲೇ ಸ್ಪಾಪ್ ಮಾಡಿ. ಅಷ್ಟೆಲ್ಲಾ ದುಡ್ಡು ಕೊಟ್ಟ ಲೆಹೆಂಗಾ ಹಾಗೇ ವೇಸ್ಟ್ ಮಾಡೋ ಬದಲು ಈ ರೀತಿ ಮಾಡಿ..
ಲೆಹೆಂಗಾಗೆ ಬೇರೆ ಕ್ರಾಪ್ ಟಾಪ್ ಮ್ಯಾಚ್ ಮಾಡಿ. ಕಲರ್ ಕಾಂಬಿನೇಷನ್ಸ್ ಮೇಲೆ ಗಮನ ಇಡಿ. ಪೀಚ್ ಹಾಗೂ ಗೋಲ್ಡ್ ಲೆಹೆಂಗಾ ನಿಮ್ಮ ಬಳಿ ಇದ್ರೆ ಅದೇ ಲೆಹೆಂಗಾಗೆ ಡಾರ್ಕ್ ಬ್ಲೂ, ಗೋಲ್ಡ್ ಅಥವಾ ಮರೂನ್ ಕ್ರಾಪ್ ಟಾಪ್ ಮ್ಯಾಚ್ ಮಾಡಿ..
ಸೇಮ್ ಲೆಹೆಂಗಾಗೆ ಬ್ಲೌಸ್ ಹಾಗೂ ದುಪ್ಪಟ್ಟವನ್ನು ದಾವಣಿ ಥರ ಉಟ್ಟರೆ ಅದು ಕೂಡ ಸೂಪರ್ ಆಗಿಯೇ ಕಾಣಿಸುತ್ತದೆ.
ಇನ್ನು ಬೇರೆ ಯಾವುದಾದರೂ ಲೆಹೆಂಗಾ ಅಥವಾ ಸ್ಕರ್ಟ್ ಇದ್ದರೆ ಅದಕ್ಕೆ ನಿಮ್ಮ ಹಳೆ ಲೆಹೆಂಗಾದ ಕ್ರಾಪ್ ಟಾಪ್ ಮ್ಯಾಚ್ ಮಾಡಿ ಹಾಕಿಕೊಳ್ಳಿ.
ಲೆಹೆಂಗಾ ಡಿಫ್ರೆಂಟ್ ಆಗಿ ಕಾಣಬೇಕು ಅಂತಾದ್ರೆ ಜೆವೆಲರಿ ಬದಲಾಯಿಸಿ, ಟ್ರಡಿಷನಲ್ ಬದಲು ಮಾಡರ್ನ್ ಅಥವಾ ಮಾಡರ್ನ್ ಬದಲು ಟ್ರಡಿಷನಲ್ ಜಿವೆಲರಿ ಹಾಕಿ.