MUST READ | ‘ಚರೋಲಿ’ಯ ಬಗ್ಗೆ ಬೇಡ ತಾತ್ಸಾರ

ಸಾಮಾನ್ಯವಾಗಿ ಹಾಲನ್ನು ಒಂದು ಪರಿಪೂರ್ಣ ಆಹಾರ ಎಂದು ಕರೆಯಲಾಗುತ್ತದೆ.  ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಹಾಲು ಹೊಂದಿರುತ್ತದೆ.

ಹಾಲಿನ ಸೇವನೆ ನಮ್ಮ ದೇಹವನ್ನು ಆರೋಗ್ಯವಾಗಿರಿಸುವಂತೆ ಮಾಡುತ್ತದೆ. ಇದರೊಂದಿಗೆ ʻಚರೋಲಿʼ ಬೀಜವನ್ನು ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಆಯುರ್ವೇದದಲ್ಲಿ ಈ ಬೀಜಗಳನ್ನು ಪ್ರಿಯಾಲಾ ಎಂದು ಕರೆಯಲಾಗುತ್ತದೆ.  ಚರೋಲಿ ಬೀಜಗಳನ್ನು ರುಬ್ಬಿ ಹಾಲಿನೊಂದಿಗೆ ಬೆರೆಸಿದರೆ ಅದು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹೇಳಿದ್ದಾರೆ.

ಚಾರ್ಪೋಪ್ಪು(ಚರೋಲಿ) ಬೀಜಗಳು ನೋಡಲು ಚಿಕ್ಕದಾಗಿರಬಹುದು, ಆದರೆ ಅವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಚರೋಲಿ ಬೀಜವು ಡ್ರೈಫ್ರೂಟ್ಟ್ ಹಣ್ಣಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ತಯಾರಿಸುವಾಗ ಚಾರ್ಪೋಪ್ಪು ಅಥವಾ ಚರೋಲಿ ಬೀಜಗಳ ಬಳಕೆಯನ್ನು ಮಾಡುವುದು ಸಾಮಾನ್ಯ.

ತಲೆನೋವು, ಶೀತ-ಕಫ ನಿವಾರಣೆಗಾಗಿ ಚರೋಳಿ ಬಳಕೆಯಲ್ಲಿದೆ. ತುರಿಕೆ, ಗಾಯಗಳನ್ನು ಗುಣಪಡಿಸಲು ಸಹಕಾರಿಯಾಗಿದೆ.

ದೇಹದ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ ದೇಹ ಶುದ್ದವಾಗಿರುಸುತ್ತದೆ.

ಹಾಲು ಮತ್ತು  ಚರೋಲಿ ಪುಡಿಯನ್ನು ಒಟ್ಟಿಗೆ ಸೇವಿಸಿದರೆ ನಿಮಗೆ ಅತಿಸಾರದ ಸಮಸ್ಯೆಯಿಂದ ಉಪಶಮನ ಸಿಗುತ್ತದೆ.

ಹಾಲು ಮತ್ತು ಚಾರ್ಪೋಪ್ಪು ಮಿಶ್ರಣ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಸಹಾಯಕವಾಗುವುದು.

ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ, ಇದು ಮಧುಮೇಹ ರೋಗಿಗಳಿಗೆ ಒಂದು ಪರಿಣಾಮಕಾರಿ ಮನೆಮದ್ದಾಗಿದೆ.

.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!